ಬಿಎಸ್‌ವೈ ಪುತ್ರ ‘ವಿಜಯೀಭವ’: ಬಿಜೆಪಿಯಲ್ಲಿ ರಣೋತ್ಸಾಹ..

Gadag -bjp vijayendra followers celebration

ಗದಗ್: ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಮಾಜಿ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ನೇಮಕವಾಗಿದ್ದು ಕಮಲ ಪಾಳಯದಲ್ಲಿ ರಣೋತ್ಸಾಹ ಹೆಚ್ಚಿದೆ.

ಛಲಗಾರ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಈ ವರೆಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುತ್ತಿದ್ದರು. ತಮ್ಮದೇ ಆದ ಅಭಿಮಾನಿಗಳ ಹಾಗೂ ಬೆಂಬಲಿಗರ ಸಮೂಹವನ್ನು ಹೊಂದಿರುವ ಬಿ.ವೈ.ವಿಜಯೇಂದ್ರ ಅವರು ಇದೀಗ ರಾಜ್ಯ ಬಿಜೆಪಿಯ ದಂಡನಾಯಕನಾಗುತ್ತಿದ್ದಾರೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ನಡೆದಿರುವ ಈ ಬೆಳವಣಿಗೆ ಕಮಲ ಪಾಳಯದಲ್ಲಿ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ.

ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಗದಗ್‌ನ ಹುಯಿಲಗೋಳ ನಾರಾಯಣ್ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಗರಸಭಾ ಸದಸ್ಯರುಗಳಾದ ಸಾಯಿ ಸಮಿತಿ ಅಧ್ಯಕ್ಷರಾದ ಅನಿಲ ಅಬ್ಬಿಗೇರಿ.ಮಧುಸಾ ಮೆಹರ್ವಾಡಿ. ವಿನಾಯಕ ಮಾನ್ವಿ.ನಾಗರಾಜ್ ತಲ್ವಾರ್. ಮಾಂತೇಶ್ ನೆಲವಡಿ. ಎಂ ಎಂ ಹಿರೇಮಠ. ಕಾಂತಿಲಾಲ್ ಬಂಸಾಲಿ. ಸುಧೀರ್ ತಾಟಿಗರ್. ಪ್ರಶಾಂತ್ ನಾಯ್ಕರ್. ಪ್ರಶಾಂತ್ ಕತ್ವ. ವಿನಾಯಕ ಹಬೀಬ್. ಶಂಕರ್ ಬದ್ದಿ. ಕಿರಣ್ ಕಲಾಲ. ವೆಂಕಟೇಶ್ ಹಬೀಬ್. ರಾಮಚಂದ್ರ ಶಿದಲಿಂಗ್.ರವಿ ಚವಾಣ್. ದೇವೇಂದ್ರಪ್ಪ ಹೂಗಾರ್ ಮೊದಾಲಾದ ಮುಖಂಡರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

You may have missed