BJP-JDS ಮೈತ್ರಿಯ ಪ್ರತಿಧ್ವನಿ; ಸಿ.ಎಂ.ಇಬ್ರಾಹಿಂಗೆ ಆಹ್ವಾನ ನೀಡಿದ ಕಾಂಗ್ರೆಸ್
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ತುಳಿಯುವ ಉದ್ದೇಶದಿಂದ ಬಿಜೆಪಿ-ಜೆಡಿಎಸ್ ಒಂದಾಗಿದೆ ಎಂದು ಕೆಪಿಸಿಸಿ ವಕ್ತಾರರೂ ಆದ ಮಾಜಿ ಶಾಸಕ ರಮೇಶ್ ಬಾಬು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಬಾಬು, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನು ಬಳಸಿಕೊಳ್ಳಲಾಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರನ್ನು ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ರಮೇಶ್ ಬಾಬು, ಕೇರಳದ ಜೆಡಿಎಸ್ ಶಾಸಕರು ದೇವೆಗೌಡರ ವಿರುದ್ದ ದನಿ ಎತ್ತಿ, ನಾವು ಪ್ರತ್ಯೇಕವಾಗಿ ಉಳಿಯುತ್ತೇವೆ ಎಂದು ಹೇಳಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲ, ಅದರ ರಾಷ್ಟ್ರೀಯ ಅಧ್ಯಕ್ಷರು ದೇವೇಗೌಡರು. ದೇವೇಗೌಡರು ಸಮಾಜವಾದಿ ಜನತಾ ಪಕ್ಷ. ಎನ್ನುವ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಗುದ್ದಲಿ ಹಿಡಿದ ರೈತನ ಪಕ್ಷ ಆದರೆ ಅದು ಸಫಲವಾಗಲಿಲ್ಲ ಎಂದು ಬೊಟ್ಟು ಮಾಡಿದರು.
ದೇವೇಗೌಡರು ಹೇಳಿದ್ದಾರೆ ಬಂಗಾಳದಲ್ಲಿ ಎಡ ಪಕ್ಷಗಳು ಬಿಜೆಪಿ ಜೊತೆ ಸೇರಿದ್ದವು ಎಂದು ಆದರೆ ನೀವು ಕೇರಳದಲ್ಲಿ ಮಾಡಿದ್ದೇನು. ಹಿರಿಯರು ಸುಳ್ಳು ಹೇಳಬಾರದು ಎಂದು ರಮೇಶ್ ಬಾಬು ಅವರು ಕುಟುಕಿದರು.
ಸಿ.ಎಂ.ಇಬ್ರಾಹಿಂ ಅವರೇ ನಿಮಗೆ ಜೆಡಿಎಸ್ ಅಲ್ಲಿ ಬೆಲೆ ಇಲ್ಲ ಆದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ರಮೇಶ್ ಬಾಬು ಅವರು ಪ್ರದೇಶ ಜೆಡಿಎಸ್ ಅಧ್ಯಕ್ಷರನ್ನು ಆಹ್ವಾನಿಸಿದರು. ಅನೇಕ ಶಾಸಕರು ಹಾಗೂ ಮಾಜಿ ಶಾಸಕರು, ಸಚಿವರು ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದ ರಮೇಶ್ ಬಾಬು, ತಾಂತ್ರಿಕ ಕಾರಣವಾಗಿ 19 ಶಾಸಕರಲ್ಲಿ ಯಾರೂ ಕೂಡ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸುತ್ತಿಲ್ಲ. ಎಲ್ಲರೂ ಸೈದ್ದಾಂತಿಕವಾಗಿ ಗಟ್ಟಿ ಇರುವ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಬಹಿರಂಗವಾಗಿ ಆಹ್ವಾನ ನೀಡುತ್ತೇನೆ ಎಂದರು.