ಅಪರೂಪದ ಪಾಷ್ಯಾನ್ ಶೋ ; ಪ್ರೇಕ್ಷಕರನ್ನು ಸೆಳೆದ ಮಾಡೆಲ್ ಗಳು

ಸ್ಟೇಜ್ ಮೇಲೆ ಬಣ್ಣದ ದೀಪಗಳ ಝಗಮಗ..
ಕಣ್ ಮನ ಸೆಳೆಯುವ ಉಡುಪುಗಳು..
ರಂಬೆ, ಊರ್ವಾಶಿ, ಮೇನಕೆಯರು ಧರೆಗಿಳಿದು ಬಂದರೇನೋ ಎಂಬಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಪ್ರೇಕ್ಷಕರನ್ನು ಸೆಳೆದ ಮಾಡೆಲ್ ಗಳು. ಇಂತಹದ್ದೊಂದು ಅಪರೂಪದ ಪಾಷ್ಯಾನ್ ಶೋಗೆ ಬೆಂಗಳೂರಿನ ಕೆಐಎಡಿಬಿ ಅಪೆಲ್ ಪಾರ್ಕ್ ಬಳಿ ಇರುವ ವೊಗ್ಯೂ ಇನ್ಸಿಟ್ಯೂಟ್ ಆಫ್ ಷ್ಯಾಷನ್ ಟೆಕ್ನಾಲಜಿ ಸಾಕ್ಷಿಯಾಯಿತು.
ವಿಶೇಷ ಎಂದರೆ ವೊಗ್ಯೂ ಇನ್ಸಿಟ್ಯೂಟ್ ಆಫ್ ಷ್ಯಾಷನ್ ಟೆಕ್ನಾಲಜಿ ಹಮ್ಮಿಕೊಂಡಿದ್ದ ಈ ಪ್ಯಾಷನ್ ಶೋ ಸಂಪ್ರದಾಯಿಕ ಹಾಗೂ ವೆಸ್ಟರ್ನ್ ಉಡುಪುಗಳ ಪ್ರದರ್ಶನಕ್ಕೆ ವೇದಿಕೆಯಾಯಿತು. ವಿವಿಧ ನಮೂನೆಯ ಸಾಂಪ್ರದಾಯಿಕ , ವೆಸ್ಟರ್ನ್ ಮತ್ತು ಇಂಡೋವೆಸ್ಟರ್ನ್ ಉಡುಪು ಧರಿಸಿದ ಲಲನೆಯರೂ ಒಬ್ಬರಿಗಿಂತ ಒಬ್ಬರು ತಾವೇನು ಕಮ್ಮಿ ಎಂಬಂತೆ ಬಿಂಕದಿಂದ ಕ್ಯಾಟ್ ವಾಕ್ ಮಾಡುತ್ತಾ ವೇದಿಕೆ ಮೇಲೆ ನಡೆಯುತ್ತಿದ್ದರೆ, ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
1996ರಲ್ಲಿ ಆರಂಭವಾದ ವೊಗ್ಯೂ ಇನ್ಸಿಟ್ಯೂಟ್ ಆಫ್ ಪ್ಯಾಷನ್ ಟೆಕ್ನಾಲಜಿ ಸಂಸ್ಥೆ, ಭಾರತದಲ್ಲೇ ನಂಬರ್ ಒನ್ ಪ್ಯಾಷನ್ ಡಿಸೈನಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ