ಸಂಕಷ್ಟಗಳ ಜೊತೆಯಲ್ಲಿ ‘ರೈತ ದಿನ’: ಅನ್ನದಾತರ ದುಸ್ಥಿತಿ ಬಗ್ಗೆ ಹೆಚ್‌ಡಿಕೆ ಬೇಸರ
ಬೆಂಗಳೂರು: ನಾಡಿನೆಲ್ಲೆಡೆ ರೈತರು ಸಂಕಷ್ಟಗಳ ನಡುವೆ ರೈತರ ದಿನವನ್ನು ಆಚರಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರಿಸ್ಥಿತಿ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಸಾಲ ಮನ್ನಾ ಮಾಡಿದ ನಂತರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದ ಅನ್ನದಾತರು, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜಿಪಿಯ ಡಬಲ್ ಎಂಜಿನ್ ಸರಕಾರಗಳ ಆಡಳಿತದಲ್ಲಿ ಅವರ ಪರಿಸ್ಥಿತಿ ಮತ್ತೆ ಚಿಂತಾಜನಕ ಆಗಿದೆ. ವಿನಾಶಕಾರಿ ನೀತಿಗಳಿಂದ ಕೃಷಿ ಅವಸಾನದತ್ತ ಸಾಗಿದೆ ಎಂದಿದ್ದಾರೆ.
ಡಬಲ್ ಎಂಜಿನ್ ಸರಕಾರದ ಕಾಲದಲ್ಲಿ ಮತ್ತೆ ರೈತ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಅನ್ನದಾತ ಸದಾ ಆತಂಕದಲ್ಲೇ ಇರುವುದು, ಅದಕ್ಕೆ ಕಾರಣವಾದ ಕೇಂದ್ರ, ರಾಜ್ಯ ಸರಕಾರಗಳ ರೈತ ವಿರೋಧಿ ನಡೆ ಅತ್ಯಂತ ಅಕ್ಷಮ್ಯ.4/5
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 23, 2022
ಡಬಲ್ ಎಂಜಿನ್ ಸರಕಾರದ ಕಾಲದಲ್ಲಿ ಮತ್ತೆ ರೈತ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಅನ್ನದಾತ ಸದಾ ಆತಂಕದಲ್ಲೇ ಇರುವುದು, ಅದಕ್ಕೆ ಕಾರಣವಾದ ಕೇಂದ್ರ, ರಾಜ್ಯ ಸರಕಾರಗಳ ರೈತ ವಿರೋಧಿ ನಡೆ ಅತ್ಯಂತ ಅಕ್ಷಮ್ಯ ಎಂದವರು ಹೇಳಿದ್ದಾರೆ.
ನನ್ನ ಪಂಚರತ್ನ ಯೋಜನೆಗಳಲ್ಲಿ ರೈತರಿಗಾಗಿ ' ರೈತ ಚೈತನ್ಯ ' ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದೇನೆ. ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡಲಾಗುವುದು. ದಿನದ 24 ಗಂಟೆ ಉಚಿತ ವಿದ್ಯುತ್ ಕೊಡುವುದರ ಜತೆಗೆ, ರಾಜ್ಯದಲ್ಲಿ ಲಭ್ಯ ಇರುವ ಪ್ರತಿ ಹನಿ ನೀರನ್ನೂ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಲಾಗುವುದು.5/5
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 23, 2022
‘ಪಂಚರತ್ನ ಯೋಜನೆಗಳಲ್ಲಿ ರೈತರಿಗಾಗಿ ‘ ರೈತ ಚೈತನ್ಯ ‘ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದ್ದೇನೆ. ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡಲಾಗುವುದು. ದಿನದ 24 ಗಂಟೆ ಉಚಿತ ವಿದ್ಯುತ್ ಕೊಡುವುದರ ಜತೆಗೆ, ರಾಜ್ಯದಲ್ಲಿ ಲಭ್ಯ ಇರುವ ಪ್ರತಿ ಹನಿ ನೀರನ್ನೂ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.vvvv