ನೀವು ನಿಜಕ್ಕೂ ಆರೋಗ್ಯವಂತರೇ..? ಮುಖ ಹೇಳುತ್ತದೆ ನಿಮ್ಮ ಅನಾರೋಗ್ಯದ ಗುಟ್ಟು

0

ದೇಹದ ಹೊರಭಾಗದ ಸಮಸ್ಯೆಯನ್ನು ನಾವು ಬೇಗನೆ ಗುರುತಿಸಬಹುದು. ಆದರೆ ದೇಹದೊಳಗಾಗುವ ಬದಲಾವಣೆಗಳು ಏರುಪೇರುಗಳು ಅಷ್ಟು ಬೇಗ ನಮಗೆ ಗೊತ್ತಾಗುವುದಿಲ್ಲ. ನಾವು ಅದರ ಬಗ್ಗೆ ಗಮನ ಹರಿಸುವುದೂ ಇಲ್ಲ.

ಪರಿಸ್ಥಿತಿ ಬಿಗಡಾಯಿಸಿದ ಬಳಿಕವಷ್ಟೇ ನಾವು ಆರೋಗ್ಯ ಹದಗೆಟ್ಟಿರುವುದನ್ನು ಮನಗಾಣುತ್ತೇವೆ. ಆದರೆ ನಿಮಗೆ ಗೊತ್ತ. ನಮ್ಮ ಮುಖ ಆರೋಗ್ಯದ ಕನ್ನಡಿಯಂತೆ. ನಮ್ಮ ಅನಾರೋಗ್ಯದ ಲಕ್ಷಣಗಳು ಮೊದಲು ಗೊತ್ತಾಗುವುದೇ ಮುಖದಲ್ಲಂತೆ.

ಒಣಬಾಯಿ– ಕೆಲವರಿಗೆ ಬಾಯಿ ಒಣಗಿದಂತೆ ಬಾಸವಾಗುತ್ತದೆ. ಪದೇ ಪದೇ ಇಂತಹ ಸಮಸ್ಯೆ ಉಂಟಾದರೆ ಇದನ್ನು ನಿರ್ಲಕ್ಷಿಸಬೇಡಿ. ಯಾಕೆಂದರೆ ಬಾಯಿಒಣಗುವುದು ವಿಟಮಿನ್ ಬಿ , ಜಿಂಕ್ ಅಥವ ಕಬ್ಬಿಣದ ಅಂಶದ ಕೊರತೆಯ ಲಕ್ಷಣಗಳು.
ಇನ್ನೂ ತುಟಿಯ ಒಂದು ಭಾಗ ಒಡೆಯುವುದು. ಇದು ಹೆಚ್ಚಾಗಿ ಕಂಡು ಬರುವುದು ಸಸ್ಯಹಾರಿಗಳಲ್ಲಿ ಹಾಗೂ ತುಂಬಾ ಕಠಿಣವಾಗಿ ಡಯೆಟ್ ಮಾಡುವವರಲ್ಲಿ. ಇದಕ್ಕೆ ಕಾರಣ ಪ್ರೋಟೀನಾ ಸಮಸ್ಯೆ. ದೇಹದಲ್ಲಿ ಅಗತ್ಯ ಪ್ರೋಟಿನ್ ಅಂಶ ಇಲ್ಲದಾಗ ಇಂತಹ ಸಮಸ್ಯೆಗಳು ಉದ್ಭವವಾಗುತ್ತದೆ.
•    ಪರಿಹಾರ- ಮೊಟ್ಟೆ, ನೆಲಗಡಲೆ, ಕಬ್ಬಿಣದ ಅಂಶಗಳಿರುವ ವಸ್ತುಗಳು, ಹಣ್ಣು ತರಕಾರಿಗಳು, ಹಾಗೂ ಮೀನಿನ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಕೂದಲು ಉದುರುವಿಕೆ.-  ಕೂದಲು ಉದುರುವಿಕೆ ವಂಶವಾಹಿನಿಯಾಗಿ ಬಂದಿರಬಹುದು. ಆದರೆ ಇದು ಪೌಷ್ಠಿಕಾಂಶದ ಕೊರತೆಯ ಲಕ್ಷಣವೂ ಹೌದು.  ವಿಟಮಿನ್ ಬಿ 7 ಮತ್ತು ವಿಟಮಿನ್ ಸಿ ಕೊರತೆಯಿಂದಾಗಿ ಹೆಚ್ಚಾಗಿ ಕೂದಲ ಉದುರುವಿಕೆ ಕಂಡು ಬರುತ್ತದೆ.
•    ಪರಿಹಾರ- ಹೆಚ್ಚಾಗಿ ಬೇಯಿಸಿದ ಮೊಟ್ಟೆ ಸೇವಿಸಿ. ಅಣಬೆ, ಸೋಯಬಿನ್, ವಾಲ್ ನಟ್ಸ್ , ಸ್ಟ್ರಾಬೇರಿ ಮತ್ತು ಬಾಳೆಹಣ್ಣು ಸೇವನೆ.

ಕೈ ಮತ್ತು ಕಾಲುಗಳು ಬಿಗಿಯಾದ ಅನುಭವ– ಇದು ನಮ್ಮ ನರವ್ಯೂಹ ವ್ಯವಸ್ಥೆಯಲ್ಲಿ ಅಥವ ರಕ್ತಸಂಚಾರದಲ್ಲಿ ಆಗಿರುವ ಕೆಲವೊಂದು ಅವ್ಯವಸ್ಥೆಯ ಲಕ್ಷಣಗಳು. ಹೆಚ್ಚು ಪ್ರಮಾಣದ ವಿಟಮಿನ್ ಬಿ ಅಂಶವುಳ್ಳ ಆಹಾರ ಸೇವನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ವಿಟಮಿನ್ ಬಿ-9, ಬಿ-6, ಮತ್ತು ಬಿ-12 ಹೆಚ್ಚು ಪ್ರಮಾಣದಲ್ಲಿ ಸೇವನೆ ಅಗತ್ಯ.
•    ಪರಿಹಾರ- ಕ್ಯಾರಟ್, ಮೊಟ್ಟೆ, ಬೀನ್ಸ್ ಮತ್ತು ಮೀನಿನ ಪದಾರ್ಥಗಳ ಸೇವನೆ

ಜಾಯಿಂಟ್ ಪೇಯಿನ್– ಇದು ಹೆಚ್ಚಾಗಿ ಅಥ್ಲೇಟ್ಸ್ ಗಳಲ್ಲಿ ಕಂಡು ಬರುವ ಸಮಸ್ಯೆಗಳು. ಹೀಗಾಗಿ ಇಂತವರು ಮ್ಯಾಗ್ನೇಷಿಯಂ, ಕ್ಯಾಲ್ಸಿಯಂ, ಮತ್ತು ಪೋಟಾಷಿಯಂ ಇರುವ ಆಹಾರವನ್ನು ಸೇವಿಸಬೇಕು.
•    ಪರಿಹಾರ- ಪ್ರತಿದಿನ ಬಾಳೆಹಣ್ಣು ಸೇವನೆ, ಬಾದಮಿ, ಚೆರ್ರಿ ಹಣ್ಣು, ಸೇಬು, ಹಸಿರು ಸೊಪ್ಪು ಸೇವನೆ

Leave a Reply

Your email address will not be published. Required fields are marked *

You may have missed