ಶಾಸಕ ಜಗದೀಶ್ ಕುಮಾರ್ ವಿಧಿವಶ; ಗಣ್ಯರ ಕಂಬನಿ
ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ. ಇಂದು ಅವರು ವಿಧಿವಶರಾಗಿದ್ದಾರೆ. ಕಟ್ಟಾ ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಬೆಂಗಳೂರಿನ ಹೆಬ್ಬಾಳ ವಿದಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಹಿಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಜಗದೀಶ್ ಕುಮಾರ್ ಇಂದು ಹಠಾತ್ ನೆ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾದರು. ಬೆಳಗ್ಗೆ ವಿಧಾನಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಜಗದೀಶ್ ಕುಮಾರ್ ಸಹೋದ್ಯೋಗಿ ಶಾಸಕರಿಗೆ ತುಳಸಿ ಹಬ್ಬದ ಶುಭಾಶಯಕೋರಿದ್ದರು. ಮದ್ಯಾಹ್ನಾದ ನಂತರದ ಕಲಾಪದಲ್ಲಿ ಭಾಗವಹಿಸಲು ಅನಿಯಾಗಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ವಿಧಾನಸೌಧದಿಂದ ಅನತಿ ದೂರದಲ್ಲಿರುವ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. 1957ರಲ್ಲಿ ಜನಿಸಿದ ಅವರು ಚಿತ್ರದುರ್ಗ-ತುಮಕೂರಿನಲ್ಲಿ ಶಿಕ್ಷಣ ಪೂರೈಸಿದ್ದರು. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಅವರು ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಸಂಘಟನಾ ಚಾತುರ್ಯ ಹೊಂದಿದ್ದ ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲಿಂದಲೇ ಸಂಘ ಪರಿವಾರದಲ್ಲಿ ಸಕ್ರಿಯರಾಗಿ ವಿವಿಧ ಕ್ಷೇತ್ರಗಳಲ್ಲಿ ಮುಖಂಡರಾಗಿ ಬಿಜೆಪಿ ಪ್ರಮುಖರು ಎನಿಸಿದರು. 1978ರಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿದ್ದ ಅವರು ಆ ಭಾಗದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಇದೇ ಹೊತ್ತಿಗೆ ಬೆಂಗಳೂರು ಸ್ಟಾಕ್ ಎಕ್ಸ್ ಚೇಂಜ್ ಸದಸ್ಯರಾಗಿಯೂ ಗುರುತಿಸಿಕೊಂಡ ಜಗದೀಶ್ ಕುಮಾರ್ ಮೂರು ಬಾರಿ ಬೆಂಗಳೂರು ಸ್ಟಾಕ್ ಎಕ್ಸ್ ಚೆಂಜ್ ನ ಅಧ್ಯಕ್ಷರಾಗಿದ್ದರು.
ಜಗದೀಶ್ ಕುಮಾರ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ , ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಆನೇಕರು ಕಂಬನಿ ಮಿಡಿದಿದ್ದಾರೆ. ಅತ್ಯುತ್ತಮ ಸಂಸದೀಯ ಪಟು ಎಂದೂ ಶಾಸಕ ಸಮೂಹದಿಂದ ಕರೆಸಿಕೊಳ್ಳುತ್ತಿದ್ದ ಜಗದೀಶ್ ಅವರ ನಿಧನದ ಸುದ್ದಿತಿಳಿಯುತ್ತಿದ್ದಂತೆ ಮುಖಂಡರು ಆನೇಕರು ಆಸ್ಪತ್ರೆಗೆ ದೌಡಾಯಿಸಿ ಬಂದರು. ಜೆಡಿಎಸ್ ನಾಯಕರಾದ ರೇವಣ್ಣ, ಸಚಿವರಾದ ಮಹದೇವಪ್ಪ ಸಹಿತ ಪ್ರಮುಖರು ಆಸ್ಪತ್ರೆಗೆ ತೆರಳಿ ದುಃಖ ವ್ಯಕ್ತಪಡಿಸಿದರು.