ಐರೋಪ್ಯ ಒಕ್ಕೂಟದಿಂದ ಹೊರಬಿದ್ದ ಬ್ರಿಟನ್

0
britain

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಿದಿದ್ದೆ. 28 ದೇಶಗಳ ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಇರಬೇಕೆ, ಬೇಡವೆ ಎಂಬ ಕುರಿತಂತೆ ನಿನ್ನೆ ಮತದಾನ ನಡೆದಿದ್ದು, ಜನಮತಗಣನೆಯಲ್ಲಿ ಜನರು ಬ್ರಿಕ್ಸಿಟ್ ಪರ ಒಲವು ತೋರಿದ್ದಾರೆ. ಹೀಗಾಗಿ ಬ್ರಿಟನ್ ಈಗ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿದೆ.

ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಇರಬೇಕು ಎಂದು ಶೇಕಡ 48.2 ರಷ್ಟು ಮತ ಚಲಾಯಿಸಿದರೆ , ಇನ್ನೂ ಒಕ್ಕೂಟದಿಂದ ಹೊರ ನಡೆಯ ಬೇಕು ಎಂಬುವುದರ ಪರವಾಗಿ ಶೇಕಡಾ 57.8 ರಷ್ಟು ಮತ ಚಲಾಯಿಸಿದ್ದಾರೆ. ಇಂದು ಬ್ರಿಟನ್ ಮ್ಯಾನ್ ಚೆಸ್ಟರ್ ಟೌನ್ ಹಾಲ್ ನಲ್ಲಿ ಕಿಕ್ಕಿರಿದು ತಂಬಿದ ಜನಸಂದಣಿಯ ನಡುವೆ ಫಲಿತಾಂಶವನ್ನು ಘೋಷಿಸಲಾಯಿತು. ಈ ಮತದಾನದ ಪ್ರಕ್ರಿಯೆಯಲ್ಲಿ 12 ಲಕ್ಷ ಅನಿವಾಸಿ ಭಾರತೀಯರು ಸೇರಿದಂತೆ 3 ಕೋಟಿ 35 ಲಕ್ಷದ 77 ಸಾವಿರದ 342 ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ ಐರೋಪ್ಯ ಒಕ್ಕೂಟದಲ್ಲಿ, ಬ್ರಿಟನ್ ಇರಬೇಕು ಎಂದು 1 ಕೋಟಿ 61 ಲಕ್ಷದ 41 ಸಾವಿರದ 241 ಮತ ಬಂದರೆ. ಒಕ್ಕೂಟದಿಂದ ಬ್ರಿಟನ್ ಹೊರ ಬರಬೇಕು ಎಂದು 1 ಕೋಟಿ 74 ಲಕ್ಷದ 10 ಸಾವಿರದ 742 ಮತಗಳು ಬಂದಿವೆ.

ಇತ್ತ ಐರೋಪ್ಯ ಒಕ್ಕೂಟ ಬ್ರಿಟನ್ ನಿಂದ ಹೊರಬರುತ್ತಿದ್ದಂತೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೊನ್, ಬ್ರಿಟನ್ ಗೆ ಹೊಸ ನಾಯಕತ್ವದ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಈ ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿರುವ ಬ್ರೆಕ್ಸಿಟ್ ಪರ ಬಣ, ಇದನ್ನು ಸ್ವಾತಂತ್ರ್ಯ ದಿನ ಎಂದು ಬಣ್ಣಿಸಿದೆ. ಬ್ರೆಕ್ಸಿಟ್ ವಿರೋಧಿ ಅಭಿಯಾನ ನಡೆಸಿದ್ದ ಪ್ರಧಾನಿ ಕ್ಯಾಮರೊನ್ ಪರ ಬಣ ಇದೊಂದು ದುರಂತ ಎಂದಿದೆ.

1973 ರಲ್ಲಿ ಒಕ್ಕೂಟದ ಹುಟ್ಟು ವ್ಯಾಪಾರ ಮತ್ತು ಭದ್ರತೆಯ ನಿಟ್ಟಿನಲ್ಲಿ ಯುರೋಪಿಯನ್ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್, ಇಟಲಿ, ಲಕ್ಸಂಬರ್ಗ್ ಮತ್ತು ನೆದರ್ಲೆಂಡ್  ದೇಶಗಳು 1985 ರಲ್ಲಿ ಯುರೋಪಿಯನ್ ಆರ್ಥಿಕ ಒಕ್ಕೂಟವನ್ನು ಹುಟ್ಟುಹಾಕಿದ್ದವು. ನಂತರ ಇದಕ್ಕೆ 22 ರಾಷ್ಟ್ರಗಳು ಸೇರ್ಪಡೆಯಾಗಿದ್ದವು. ಈ ಪೈಕಿ ಬ್ರಿಟನ್ 1973 ರಲ್ಲಿ ಸೇರ್ಪಡೆಯಾಗಿತ್ತು

Leave a Reply

Your email address will not be published. Required fields are marked *

You may have missed