ಮೈಸೂರು ಅರಮನೆ ಆವರಣದಿಂದ ದಕ್ಕಾಪಾಲಾಗಿ ಓಡಿ ಆತಂಕ ಸೃಷ್ಟಿಸಿದ ಆನೆಗಳು

ಮೈಸೂರು: ಜಗದ್ವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಿ ಸಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಕೂಡಾ ಅರಮನೆ ಆವರಣದಲ್ಲಿ ಗಮನಸೆಳೆಯುತ್ತಿದೆ.

ಈ ನಡುವೆ, ಶುಕ್ರವಾರ ಎರಡು ಆನೆಗಳು ಅರಮನೆಯ ಆವರಣದಿಂದ ಏಕಾಏಕಿ ಹೊರನಡೆದು ಆತಂಕ ಸೃಷ್ಟಿಸಿತು.

ದಸರಾ ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟದ ಸಮಯದಲ್ಲಿ ಗಲಾಟೆ ನಡೆದಿದೆ.‌ ಧನಂಜಯ ಆನೆಯಿ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿದೆ. ಬೆದರಿದ ಕಂಜನ್ ಆನೆ ಓಡಲಾರಂಭಿಸಿದೆ. ಅದನ್ನು ಕಂಡ ಧನಂಜಯ ಆನೆ ಕಂಜನ್ ಆನೆಯನ್ನು ಬನ್ನಟ್ಟಿದೆ.

ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿ ಜನರಿದ್ದ ಸ್ಥಳಕ್ಕೆ ಧಾವಿಸಿದೆ. ಅದಾಗಲೇ ಮಾವುತ ಧನಂಜಯನನ್ನು ನಿಯಂತ್ರಣ ಮಾಡಿದ್ದಾನೆ. ಬಳಿಕ ಕಂಜನ್ ಆನೆಯನ್ನು ಅರಮನೆ‌ ಆವರಣಕ್ಕೆ ಕರೆ ತರಲಾಗಿದೆ.

You may have missed