dog marriage

ಉತ್ತರ ಪ್ರದೇಶದ .. ನಲ್ಲಿ ನಡೆದ ವಿವಾಹ ಸಮಾರಂಭವೊಂದು ಹಲವು ಕಾರಣಗಳಿಂದ ಗಮನ ಸೆಳೆಯಿತು…
ಹಳ್ಳಿ ಜನರಾದರೂ ಅದೊಂದು ಸೆಲೆಬ್ರಿಟಿ ಮದುವೆಯಂತಿತ್ತು. ಹೆಣ್ಣಿನ ಮನೆಯವರು ಬಡವರಾದರು, ಆಡಂಬರದ ಶ್ರೀಮಂತಿಕೆಗೆ ಇಲ್ಲಿ  ಕೊರತೆಯಿರಲಿಲ್ಲ. ಹೌದು … ಇಲ್ಲಿ ನಡೆದ ಶ್ವಾನಗಳ ಮದುವೆಯೊಂದು ನಿಜಕ್ಕೂ ಕುತೂಹಲಕ್ಕೆ ಕಾರಣವಾಯಿತು.
ಮನೆಯಲ್ಲಿ ಸಾಕಿದ ಮದ್ದು ಶ್ವಾನಗಳನ್ನು ಮದುವೆ ಮಾಡಿಕೊಟ್ಟ ಕುಟುಂಬಸ್ಥರು ವಧುವನ್ನು ಬಿಳ್ಗೊಳ್ಳುವಾಗ ನಿಜಕ್ಕೂ ಕಣ್ಣೀಧಾರೆ ಹರಿಸಿದರು.

ಇನ್ನೂ ಯಾವ ರೂಪಸಿಗೂ ಕಮ್ಮಿ ಇಲ್ಲದಂತೆ ಸಿಂಗಾರಗೊಂಡ ಮಧುಮಗಳು, ಅಲಂಕೃತ ಇನ್ನೋವಾ ಕಾರಿನಲ್ಲಿ ಹೊರಡುತ್ತಿದ್ದಂತೆ ಸಾವಿರಾರು ಮಂದಿ ಮದುವೆ ದಿಬ್ಬಣದ ಉದ್ದಕ್ಕೂ ಸಾಗಿ, ಕುಣಿದು ಕುಪ್ಪಳಿಸಿ, ವಧುವಿಗೆ ಆಶೀರ್ವಾದ ಮಾಡಿದರು. ವರನ ಕಡೆಯವರು ತಾವೇನು ಕಮ್ಮಿ ಇಲ್ಲ ಎಂಬಂತೆ ಮಧುವಿನ ಮನೆಗೆ ಬಂದು, ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯ ನೆರವೇರಿಸಿದರು.

ಮದುವೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯ ಬೋಜನವನ್ನು ಏರ್ಪಡಿಸಲಾಗಿತ್ತು.
ಇನ್ನು ಪ್ರೀತಿಯಿಂದ ಮನೆಮಗಳಂತೆ ಸಾಗಿತ ವಧುವನ್ನು ಬಿಳ್ಗೊಡುವಾಗ ಮನೆಯ ಯಜಮಾನ ಕಣ್ಣೀರಾದ ದೃಷ್ಯ ನೋಡುಗರ ಕಣ್ಣಲ್ಲೂ ನೀರು ತರಿಸಿತು. ಶ್ವಾನಗಳ ವಿವಾಹ ಕುರಿತಂತೆ ಮಾತನಾಡಿದ ಜನ, ಗ್ರಾಮಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಇಂತಹದ್ದೊಂದು ಕಾರ್ಯಕ್ರಮವನ್ನು ನೆರವೇರಿಸಿರುವುದಾಗಿ ವಿವರಿಸಿದರು.
ಓಟಾರೆ ಶ್ವಾನಗಳ ಅದ್ದೂರಿ ವಿವಾಹ ಸಮಾರಂಭ ನಿಜಕ್ಕೂ ನೋಡುಗರಿಗೆ ಮಜಾ ನೀಡಿದರೆ, ಇಂತಹದೊಂದು ಆಚರಣೆಯ ಹಿಂದಿನ ಉದ್ದೇಶ ಮೂಡನಂಬಿಕೆಯೇ ನಿಜವೆ ಎಂಬ ಜಿಜ್ಞಾಸ ಜನರನ್ನು ಕಾಡತೊಡಗಿದ್ದಂತೂ ಸುಳ್ಳಲ್ಲ.

Leave a Reply

Your email address will not be published. Required fields are marked *

You may have missed