ರಾಜ್ಯದಲ್ಲಿ ಡೆಂಗ್ಯೂ ಮರಣ ಮೃದಂಗ; ನಿಯಮ ಮೀರಿದವರಿಗೆ ದಂಡ
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಮರಣ ಮೃದಂಗ ಭಾರಿಸುತ್ತಿದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ರಾಜ್ಯಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ನೈರ್ಮಲ್ಯ ಕಾಪಾಡದವರಿಗೆ ದಂಡವಿಧಿಸಲು ಸರ್ಕಾರ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿರುವ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಇತರ ಜಿಲ್ಲೆಗಳಲ್ಲಿ ಡಿಸಿಗಳಿಗೆ ಆದೇಶ ನೀಡಿದೆ. ಖಾಲಿ ನಿವೇಶನಗಳನ್ನು ಪರಿಶೀಲಿಸಿ ನೋಟಿಸ್‌ಗಳನ್ನು ನೀಡಬೇಕು ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಅಧಿಕಾರ ನೀಡಿದೆ.
ಯಾರಿಗೆ ಎಷ್ಟು ದಂಡ?
-
ನಗರ ಪ್ರದೇಶದ ಮನೆಗಳಿಗೆ 400 ರೂ.
-
ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂ.
-
ನಗರ ಪ್ರದೇಶದ ವಾಣಿಜ್ಯ ಸ್ಥಳಗಳಿಗೆ 1,000 ರೂ.
-
ಗ್ರಾಮೀಣ ಭಾಗಗಳ ವಾಣಿಜ್ಯ ಸ್ಥಳಗಳಿಗೆ 500 ರೂ.
-
ನಗರ ಪ್ರದೇಶದ ನಿರ್ಮಾಣ ಸ್ಥಳ, ಖಾಲಿ ನಿವೇಶನಗಳಿಗೆ 2,000 ರೂ.
-
ಗ್ರಾಮೀಣ ಪ್ರದೇಶದ ನಿರ್ಮಾಣ ಸ್ಥಳ, ಖಾಲಿ ನಿವೇಶನಗಳಿಗೆ 1,000 ರೂ.
-
ಪುನರಾವರ್ತಿತ ಅಪರಾಧಗಳಿಗಾಗಿ, ಉಲ್ಲಂಘನೆಯ ಪ್ರತಿ ವಾರಕ್ಕೆ ಒಟ್ಟು ಮೊತ್ತದ 50% ಹೆಚ್ಚುವರಿ ದಂಡ.
ಸೊಳ್ಳೆಗಳ ಉತ್ಪತ್ತಿ ತಾಣಗಳ ನಿವಾರಣೆಗೆ ಮಾಲೀಕರು ತಕ್ಷಣ ಕ್ರಮ ಕೈಗೊಳ್ಳಬೇಕು. ಕಾರ್ಯನಿರ್ವಹಿಸಲು ವಿಫಲವಾದ ವ್ಯಕ್ತಿಗೆ ದಂಡ ವಿಧಿಸಬೇಕು ಎಂದು ಸರ್ಕಾರವು ಅಧಿಕಾರಿಗಳಿಗೆ ಸೂಚಿಸದೆ. ಈ ಕುರಿತಂತೆ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿರುವ ನಮ್ಮ ಸರ್ಕಾರ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಡೆಂಗ್ಯೂ ನಿಯಂತ್ರಣಕ್ಕೆ ಸ್ವಚ್ಛತೆ ಮತ್ತು ಸೊಳ್ಳೆಗಳ ಉತ್ಪತ್ತಿಗೆ ತಡೆಯೊಡ್ಡುವುದು ಪ್ರಮುಖವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಸ್ವಚ್ಛತೆ ಕಾಪಾಡದೆ ನಿಯಮ… pic.twitter.com/LviPkYu6hR
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 4, 2024