ಜಿಮ್ ಅಭ್ಯಾಸ ವೇಳೆ ಗಾಯ ; ಚಾಲೆಂಜಿಂಗ್ ಸ್ಟಾರ್ ಹಠಾತ್ ಆಸ್ಪತ್ರೆಗೆ

0
darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಠಾತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾರೀರಿಕ ಅಭ್ಯಾಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಅವರು, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಿಗೆ ಜಿಮ್ ಅಭ್ಯಾಸದಲ್ಲಿ ತೊಡಗಿದ್ದರು. ಆ ವೇಳೆ ಸಂಭವಿಸಿದ ಘಟನೆಯಲ್ಲಿ ಅವರು ಗಾಯಗೊಂಡರು. ಕೂಡಲೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತಾದರೂ ವಿಪರೀತ ನೋವಿನಿಂದ ಬಳಲಿದ ಅವರನ್ನು ಬೆಂಗಳೂರು ಹೊರವಲಯದಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ತಪಾಸಣೆ ಕೈಗೊಂಡ ವೈದ್ಯರು, ದರ್ಶನ್ ಅವರ ಎಡಭುಜಕ್ಕೆ ಏಟು ಬಿದ್ದಿರುವುದನ್ನು ದೃಢಪಡಿಸಿದರು. ಅವರನ್ನು ವಿವಿಧ ಪರೀಕ್ಷೆಗೂ ಗುರಿಪಡಿಸಿ ಚಿಕಿತ್ಸೆ ಆರಂಭಿಸಿದರು.

ಬೆಳಿಗ್ಗೆ ಎಂದಿನಂತೆ ದರ್ಶನ್ ಜಿಮ್ ಅಭ್ಯಾಸ ನಡೆಸುತ್ತಿದ್ದರು. ಆ ವೇಳೆ ಆಯ ತಪ್ಪಿ ಘಟನೆಯೊಂದು ನಡೆಯಿತು. ಅವರ ಎಡಭುಜಕ್ಕೆ ಬಲವಾದ ಏಟು ಬಿತ್ತು. ಆರಂಭದಲ್ಲಿ ಸಣ್ಣ ಪ್ರಮಾಣದ ಗಾಯವಾಯಿತು ಎಂದುಕೊಂಡರು. ವಿಪರೀತ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವೆನಿಸಿತು. ಹಾಗಾಗಿ, ಅವರ ಜೊತೆಗಿದ್ದವರು ತಕ್ಷಣವೆ ವೈದ್ಯರ ಬಳಿಗೆ ಕರೆದೊಯ್ದರು. ಚಿಕಿತ್ಸೆ ನೀಡುತ್ತಿರುವ ವೈದ್ಯರು ಇದೊಂದು ಸಣ್ಣ ಪ್ರಮಾಣದ ಏಟು ಎಂದು ಹೇಳಿದರಾದರೂ ಎಡಭುಜದಲ್ಲಿನ ಪ್ರ್ಯಾಕ್ಚರ್ ಹಿಂದಿನಂತೆ ಸಹ ಸ್ಥಿತಿಗೆ ಮರಳಬೇಕಿದ್ದರೆ ಕನಿಷ್ಟ 20 ದಿನ ಬೇಕಿದೆ ಎಂದು ಹೇಳಿದ್ದಾರೆ. ಹಾಗಾಗಿ 20 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ದರ್ಶನ್ ಗೆ ವೈದ್ಯರು ಸಲಹೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಐರಾವತ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ದರ್ಶನ್ ಮುಂದಿನ ಚಿತ್ರಗಳ ಯಶಸ್ಸನ್ನು ಎದುರು ನೋಡುತ್ತಿದ್ದರು. ಶೂಟಿಂಗ್ ಶೆಡ್ಯೂಲ್ ನ ಬಿಜಿಯ ನಡುವೆಯೂ ಅವರು ದೇಹದಾಢ್ಯ ಸಮತೋಲನಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಾಗಾಗಿ, ಜಿಮ್ ನತ್ತ ಹೆಚ್ಚಿನ ಗಮನ ಕೇಂದ್ರಿಕರಿಸುತ್ತಿದ್ದಾರೆ. ಜಿಮ್ ಬಗ್ಗೆ ಅಪಾರ ಒಲವು ಹೊಂದಿರುವ ಅವರು, ಹಲವು ತಾಸುಗಳ ಕಾಲ ಮೈಕೈಗೆ ಕಸರತ್ತನ್ನು ನೀಡುತ್ತಿರುತ್ತಾರೆ. ಆದರೆ, ಇಂದು ಬೆಳಿಗ್ಗೆ ಅದೇನಾಯಿತೋ ಗೊತ್ತಿಲ್ಲ. ಜಿಮ್ ಅಭ್ಯಾಸದಲ್ಲಿ ನಿರತವಾಗಿದ್ದಾಗಲೇ ಈ ಒಂದು ಸಣ್ಣ ಎಡವಟ್ಟು ಉಂಟಾಗಿ ಅವರು ಆಸ್ಪತ್ರೆಗೆ ತೆರಳುವಂತಾಯಿತು. ಅಷ್ಟೇ ಅಲ್ಲ ಇನ್ನು 20 ದಿನಗಳ ಕಾಲ ಯಾವುದೇ ಶಾರೀರಿಕ ಅಭ್ಯಾಸ  ನಡೆಸುವುದು ಸೂಕ್ತವಲ್ಲ ಎಂಬುದು ವೈದ್ಯರ ಸಲಹೆ.

Leave a Reply

Your email address will not be published. Required fields are marked *

You may have missed