ಡಾರ್ಕ್ ಆಂಡರ್ ಆರ್ಮ್ಸ್ ನಿಂದ ಮುಕ್ತಿ ಹೇಗೆ
ಕಂಕುಳಲ್ಲಿನ ಕಪ್ಪು ಕೆಲವರಲ್ಲಿ ಮುಜುಗರವನ್ನು ಉಂಟು ಮಾಡುತ್ತದೆ. ಅದರಲ್ಲೂ ಸ್ಲೀವ್ ಲೆಸ್ ಧರಿಸುವ ಮಹಿಳೆಯರಿಗೆ ಇದೊಂದು ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಶೇವಿಂಗ್ , ಡಿಯೋಡ್ರೆಂಟ್ ಗಳ ಬಳಕೆಯಿಂದ ಕೈಕೆಳಗೆ ಕಪ್ಪಾಗುವುದು ಸಹಜ. ಹೀಗಾಗಿ ಇದರ ಪರಿಹಾರಕ್ಕೆ ಹಲವಾರು ಮಂದಿ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಹಸಿ ಆಲೂಗಡ್ಡೆ– ಬಟಾಟೆಯನ್ನು ರುಬ್ಬಿ ಅದರ ರಸವನ್ನು ಹತ್ತಿಯ ಸಹಾಯದಿಂದ ಕಂಕುಳಿಗೆ ಹಚ್ಚುವುದರಿಂದ ಇದು ನ್ಯಾಚುರಲ್ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇನ್ನು ಮುಖ ಹಾಗೂ ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ತೆಗೆಯುವಲ್ಲೂ ಆಲೂಗಟ್ಟೆ ಹೆಚ್ಚಿನ ಪಾತ್ರವಹಿಸುತ್ತದೆ. ಆಲೂಗಡ್ಡೆ ರಸ ಹಚ್ಚಿದ ನಂತರ 30 ನಿಮಿಷ ಬಿಟ್ಟು ಆ ಜಾಗವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
ನಿಂಬೆರಸ..
ನಿಂಬೆರಸ ತ್ವಜೆಯನ್ನು ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದೊಂದು ಪರಿಣಾಮಕಾರಿ ನ್ಯಾಚುರಲ್ ಬ್ಲೀಚ್ ಎಂದೇ ಗುರುತಿಸಲ್ಪಟ್ಟಿರುವ ಹಣ್ಣಾಗಿದ್ದು, ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ ಎಂದೇ ಹೇಳಬಹುದು. ನಿಂಬೆರಸ ಟ್ಯಾನ್ ಆಗಿರುವ ತ್ವಚೆಯನ್ನು ಬಿಳುಪುಗೊಳಿಸುತ್ತದೆ, ಅಲ್ಲದೆ ವಯಸ್ಸಾಗುವಿಕೆಯಿಂದ ಬರುವ ಕೆಲವೊಂದು ಚರ್ಮದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಪಿಗ್ ಮೆಂಟೇಷನ್ ಮತ್ತು ಹೈಪರ್ ಪಿಗ್ ಮೆಂಟೇಷನ್ ನಿಂದ ಮುಕ್ತಿ ನೀಡುತ್ತದೆ. ಅಷ್ಟೇ ಅಲ್ಲದೆ ದೇಹದ ದುರ್ಗಂಧವನ್ನು ದೂರಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಲೆಂಬೆಹಣ್ಣಿನ ಅರ್ಧಭಾಗವನ್ನು ಒಂದು ಭಾಗದ ಕಂಕುಳಿಗೆ ಹಚ್ಚಿ 5 ರಿಂದ 8 ನಿಮಿಷಗಳ ಕಾಲ ಅರ್ಧ ಲಿಂಬೆಹಣ್ಣಿನ ಭಾಗದಿಂದಿ ಕಂಕುಳನ್ನು ಮಸಾಜ್ ಮಾಡುತ್ತಲೇ ಇರಿ. ಹೀಗೆ ಎರಡು ಭಾಗ ಮಾಡಿದ ಬಳಿಕ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಉತ್ತಮ ಮಾಯಿಶ್ಛರೈಸರ್ ಬಳಸಿ.
.
ಅಕ್ಕಿ ಹಿಟ್ಟು ಹಾಗೂ ವಿನೇಗರ್
ಅಕ್ಕಿ ಹಿಟ್ಟು ಹಾಗೂ ವಿನೇಗರ್ ಮಿಶ್ರಣವನ್ನು ಕಂಕುಳಿಗೆ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವಾರಕ್ಕೆ ಮೂರು ಅಥವ ನಾಲ್ಕು ಬಾರಿ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
.
ಕಡ್ಲೆಹಿಟ್ಟು
ಕಡ್ಲಹಿಟ್ಟು ಸತ್ತು ಜೀವಕೊಶಗಳನ್ನು ಹೊರತೆಗೆದು, ಕಾಂತಿಯುತ ತ್ಜಚೆಯನ್ನು ನೀಡುತ್ತದೆ. ಹೀಗಾಗಿ 2 ಚಮಚ ಕಡ್ಲೆ ಹಿಟ್ಟಿಗೆ ಲಿಂಬೆರಸವನ್ನು ಸೇರಿಸಿ ಕಂಕುಳಿಗೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ತ್ವಜೆ ಗೌರವವರ್ಣ ಪಡೆಯುವುದು…