ಕರೆಂಟ್ ಬಿಲ್ ವಿಚಾರ.. ಸರ್ಕಾರಕ್ಕೆ ಶಾಕ್ ಕೊಟ್ಟ ಕೋರ್ಟ್..
ದಾವಣಗೆರೆ: ಕರೆಂಟ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಗೆ 25 ಸಾವಿರ ದಂಡ ವಿಧಿಸಿದ ಗ್ರಾಹಕರ ಪರಿಹಾರ ಆಯೋಗ.! ದಾವಣಗೆರೆ ಕರೆಂಟ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂಗೆ 25 ಸಾವಿರ ದಂಡವನ್ನು ಗ್ರಾಹಕರ ಪರಿಹಾರ ಆಯೋಗ ವಿಧಿಸಿದೆ. ಬೆಸ್ಕಾಂ ಅಧಿಕಾರಿಗಳು ಕಾನೂನು ಬಾಹಿರವಾಗಿ ನಗರದ ಪವನ್ ಉಲ್ಲಾಸ್ ರೇವಣ್‍ಕರ್ ಮನೆಯ ವಿದ್ಯುತ್ ಸರಬರಾಜನ್ನು ತಡೆಹಿಡಿದಿದ್ದು, ಈ ಕೂರಿತು ಪವನ್ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರಿನ ಸಲ್ಲಿಸಿದ್ದರು, ದೂರ ಮೇರೆಗೆ ವಿಚಾರಣೆ ನಡೆಸಿ, ವಾದ ಪ್ರತಿವಾದವನ್ನು ಆಲಿಸಿದ ಆಯೋಗ, ಬೆಸ್ಕಾಂ ಕಂಪನಿ ಮೇಲೆ ರೂ.25000 ದಂಡ ವಿಧಿಸಿದೆ.
ಮೂರು ತಿಂಗಳಿಂದ ಬಿಲ್ ಪಾವತಿಸಿರುವುದಿಲ್ಲ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಗ್ರಾಹಕರು ಬೆಸ್ಕಾಂ ತನ್ನ ಸೇವೆಯನ್ನು ನೀಡುವಾಗ ಕೆಇಆರ್ ಸಿ ಕೋಡ್ 2004 ರ ನಿಯಮ-9 ರ ಅಡಿಯಲ್ಲಿನ ಪ್ರಕ್ರಿಯೆಗಳನ್ನು ಪಾಲಿಸದೇ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಇದಕ್ಕೆ ಗ್ರಾಹಕರಿಗೆ ನೀಡುವ ಸೇವಾ ನ್ಯೂನ್ಯತೆ ಎಂದು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು ಆದೇಶಿಸಿದೆ. ದೂರುದಾರನಿಗೆ ಉಂಟಾದ ಮಾನಸಿಕ ಹಿಂಸೆ ಮತ್ತು ಪ್ರಕರಣದ ನಡವಳಿಕೆಗೆ ರೂ.20,000 ಮತ್ತು ಪ್ರಕರಣದ ಖರ್ಚಿಗಾಗಿ ರೂ.5,000 ಗಳಂತೆ ಬೆಸ್ಕಾಂ ಕಂಪನಿಯವರು ದೂರುದಾರರಿಗೆ ಆದೇಶವಾದ 30 ದಿನಗಳ ಒಳಗಾಗಿ ನೀಡಬೇಕು, ತಪ್ಪಿದ್ದಲ್ಲಿ ಪ್ರತಿಶತ ಶೇ.6 ರಂತೆ ಬಡ್ಡಿಸಹಿತ ಪಾವತಿಸಬೇಕೆಂದು ಜೂನ್.21 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಾಂತೇಶ ಈರಪ್ಪ ಶಿಗ್ಲಿ ಮತ್ತು ಮಹಿಳಾ ಸದಸ್ಯರಾದ ಗೀತಾ ಬಿ.ಯು ಅವರು ತೀರ್ಪು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪವನ್, ಗ್ರಾಹಕರು ಕೆಲೊಮ್ಮೆ ಕಾರಣಾಂತರದಿಂದ ಬಿಲ್ ಕಟ್ಟಲು ತಡವಾದರೂ, ಏಕಾ ಏಕಿ ಬಂದು ಲೈನ್ ಮ್ಯಾನ್ ಫ್ಯೂಜ್ ತೆಗೆದು ಹೋಗುತ್ತಾರೆ, ಇದು ತಪ್ಪು, KERC Section 9 ರ ಅನ್ವಯ ಅವರು ಮೊದಲು 15 ದಿನದ ನೋಟಿಸ್ ನೀಡಬೇಕು, ನಂತರ ಕ್ರಮ ಕೈಗೊಳ್ಳಬೇಕು ಎಂಬ ನೀಯಮವಿದೆ. ಆದರೆ, ಬೆಸ್ಕಾಂ ಬಿಲ್ ನ ಹಿಂಬದಿ 15 ದಿನ ಸಮಯ ಎಂದು ನಮೋದಿಸಿ, ಅದೇ ನೋಟಿಸ್ ಎಂದು ಪರಿಗಣಿಸಿ ಎನ್ನುತ್ತಿದ್ದರು, ಇದನ್ನು ನಾನು ಪ್ರಶ್ನಿಸಿದ್ದೆ. ನನ್ನ ಹೋರಾಟಕ್ಕೆ ಗ್ರಾಹಕರ ಆಯೋಗ ನ್ಯಾಯ ದೊರಕಿಸಿದೆ ಎಂದಿದ್ದಾರೆ.