ಹರಿಯಾಣದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧ್ಯತೆ: ಎಕ್ಸಿಟ್ ಪೋಲ್ ರಿಸಲ್ಟ್
ನವದೆಹಲಿ: ಹರಿಯಾಣ ವಿಧಾನಸಭೆಗೆ ನಡೆದ ಶನಿವಾರ ಮತದಾನ ನಡೆದಿದ್ದು ಇದೀಗ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿವೆ.
ಬಹುತೇಕ ಸಂಸ್ಥೆಗಳ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂಬ ಸುಳಿವನ್ನು ನೀಡಿವೆ.
ಹರಿಯಾಣದಲ್ಲಿ ಈವರೆಗೂ ಅಧಿಕಾರ ನಡೆಸಿರುವ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
ಸಮೀಕ್ಷಾ ಫಲಿತಾಂಶ ಹೀಗಿದೆ:
ರಿಪಬ್ಲಿಕ್-ಮ್ಯಾಟ್ರಿಜ್: ಕಾಂಗ್ರೆಸ್ 55-62 ಸ್ಥಾನಗಳು, ಬಿಜೆಪಿ 18-24 ಸ್ಥಾನಗಳು, ಜೆಜೆಪಿ 0-3 ಸ್ಥಾನಗಳು, ಐಎನ್‌ಎಲ್‌ಡಿ 3-6 ಸ್ಥಾನಗಳು, ಇತರೆ 2-5 ಸ್ಥಾನಗಳು.
ದೈನಿಕ್ ಭಾಸ್ಕರ್: ಕಾಂಗ್ರೆಸ್ 44-54 ಸ್ಥಾನಗಳು, ಬಿಜೆಪಿ 19-29 ಸ್ಥಾನಗಳು, ಜೆಜೆಪಿ 0-1 ಸ್ಥಾನಗಳು, ಐಎನ್‌ಎಲ್‌ಡಿ 1-5 ಸ್ಥಾನಗಳು, ಇತರರು 4-9 ಸ್ಥಾನಗಳು
ಧ್ರುವ್ ಸಮೀಕ್ಷೆ: ಕಾಂಗ್ರೆಸ್ 57-64 ಸ್ಥಾನಗಳು, ಬಿಜೆಪಿ 27-32 ಸ್ಥಾನಗಳು, ಇತರರು 5-8 ಸ್ಥಾನಗಳು.