ಕಾಫಿ ಪುಡಿಯಿಂದ ಡಾರ್ಕ್ ಸರ್ಕಲ್ ಔಟ್
ಕೆಲಸದ ಒತ್ತಡ , ಜೀವನ ಶೈಲಿ, ವಂಶಪಾರಂಪರೆ ಹೀಗೆ ಹಲವು ಕಾರಣಗಳಿಂದಾಗಿ ಡಾರ್ಕ್ ಸರ್ಕಲ್ ಎಂಬ ಭೂತ ನಮ್ಮನ್ನ ಭಾದಿಸುತ್ತದೆ. ಅಲ್ಲದೆ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಭಾದಿಸುತ್ತದೆ. ಅದರಲ್ಲೂ ಮಹಿಳೆಯರಿಗೆ ಕಣ್ಣಿನ ಸುತ್ತ ಕಪ್ಪು ಮೂಡಿದರೆ ಏನೂ ಒಂದು ರೀತಿಯ ಹಿಂಜರಿಕೆ. ಇದಕ್ಕಾಗಿ ಅದೆಷ್ಟೋ ಮಂದಿ ಸಿಕ್ಕ ಸಿಕ್ಕ ಕ್ರೀಮ್ ಗಳನ್ನೆಲ್ಲಾ ಬಳಸಿದ್ದು ಇದೆ.
ಬಟ್ ನೋ ಯೂಸ್. ಆದರೆ ನಿಮಗೆ ಗೊತ್ತಾ, ನಿಮ್ಮ ಅಡುಗೆ ಮನೆಯಲ್ಲಿ ಯಾವಾಗಲು ಇರುವ ವಸ್ತುವೊಂದು ನಿಮ್ಮ ಡಾರ್ಕ್ ಸರ್ಕಲ್ ಗೆ ಮುಕ್ತಿ ನೀಡುತ್ತದೆಯಂತೆ. ಎಸ್ ಹೌದು, ಕಾಫಿ ಪುಡಿಯಿಂದ ಡಾರ್ಕ್ ಸರ್ಕಲ್ ನಿವಾರಣೆ ಮಾಡಬಹುದಾಗಿದೆ. ಕಾಫಿಪುಡಿಯಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಚರ್ಮವನ್ನು ಮೃದುವಾಗಿರಿಸುತ್ತದೆ.
ಅಷ್ಟೇ ಅಲ್ಲದೆ ಇದರ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚುವುದರಿಂದಿ ರಕ್ತಚಲನೆ ಹೆಚ್ಚಾಗಿ, ಕಣ್ಣಿನ ಕೆಳಗಿರುವ ಫಫಿನೆಸ್ (ಕಣ್ಣಿನ ಕೆಳಗಿನ ಊತ) ಕಡಿಮೆಯಾಗುತ್ತದೆ.
ಕಾಫಿ ಪುಡಿಗೆ ಸ್ಪಲ್ಪ ತೆಂಗಿನ ಎಣ್ಣೆ ಬೆರೆಸಿ ಈ ಮಿಶ್ರಣವನ್ನು ಕಣ್ಣಿನ ಕೆಳಭಾಗಕ್ಕೆ ಲೇಪಿಸಿ. 10 ನಿಮಿಷಗಳ ನಂತರ ಕಾಟನ್ ಅಥವ ಟಿಷ್ಯೂ ನ ಸಹಾಯದಿಂದ ಈ ಮಿಶ್ರಣವನ್ನು ತೆಗೆಯಿರಿ. ಸ್ಪಲ್ಪ ಸಮಯದ ನಂತರ ಮುಖ ತೊಳೆದು ಕೂಡಲೇ ಯಾವುದಾದರೂ ಮಾಯಿಶ್ಟರೈಸರ್ ಕ್ರೀಮ್ ಬಳಸಿ. ವಾರಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.