‘ನಾನು ಕೊಟ್ಟಿದ್ದೇ ಐದು…’ ಸಿಎಂ ಪುತ್ರ ಯತೀಂದ್ರರ ವೀಡಿಯೋ ವೈರಲ್..

ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ, ಡಾ.ಯತೀಂದ್ರ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಸರ್ಕಾರದ ನಡೆ ಬಗ್ಗೆ ಈ ವೀಡಿಯೋ ಅನೇಕಾಕಾನೇಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಅಪ್ಪನ ಸರ್ಕಾರದ ಆಡಳಿತದಲ್ಲಿ ಪುತ್ರನ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳು ಆರೋಪಿಸುತ್ತಿದ್ದಂತೆಯೇ ಈ ವೈರಲ್ ವೀಡಿಯೋ ಗಮನಕೇಂದ್ರೀಕರಿಸಿದೆ.

ವಿಡಿಯೊದಲ್ಲಿ ಏನಿದೆ?:

ಮೈಸೂರು ಸಮೀಪದ ಗ್ರಾಮವೊಂದರಲ್ಲಿ ಜನಸಂಪರ್ಕ ಸಭೆ ವೇಳೆ, ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಯತೀಂದ್ರ ಅವರು ಮೊಬೈಲ್ ಕರೆಯಲ್ಲಿ ಮಾತನಾಡುತ್ತಾ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ‘ನಾನು ಕೊಟ್ಟಿರುವುದೇ ಐದು…’ ಅಂತ ಹೇಳಿ ತಾನು ನೀಡಿದಷ್ಟನ್ನೇ ಮಾಡು ಎಂದು ಆದೇಶಿಸಿ ಮೊಬೈಲ್ ಫೋನನ್ನು ಆಪ್ತರಿಗೆ ನೀಡಿದ್ದಾರೆ.

ಸಿಎಂ ಪುತ್ರ ಯತೀಂದ್ರ ಮಾತನಾಡಿರುವ ವಿಡಿಯೊವನ್ನು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.

ಕೆಲ ಸಮಯದ ಹಿಂದಷ್ಟೇ, ರಾಜ್ಯದಲ್ಲಿ ವೈಎಸ್​ಟಿ ಕಲೆಕ್ಟ್ ಮಾಡಲಾಗುತ್ತಿದೆ ಎಂದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿಸುತ್ತಿದ್ದರು. ಇದೀಗ ಅದಕ್ಕೆ ಪೂರಕವಾಗಿ ಅವರು ವೀಡಿಯೋವೊಂದನ್ನು ರಿಲೀಸ್ ಮಾಡಿ ವಿದ್ಯಮಾನಗಳಿಗೆ ರೋಚಕತೆ ತುಂಬಿದ್ದಾರೆ.

You may have missed