ಅಸಹಿಷ್ಣುತೆ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಮೂರ್ಖತನ; ಚಿದಾನಂದಮೂರ್ತಿ,

0

ದೇಶದಲ್ಲಿ ಅಸಹಿಷ್ಣುತೆ ತಲೆದೋರಿದೆ ಎಂದು ಸಾರಿ ಸಾಹಿತಿಗಳು ಮತ್ತು ಕಲಾವಿದರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದನ್ನು ಖಂಡಿಸಿ ರಾಜಭವನದವರೆಗೆ ಮೆರವಣಿಗೆ ರಾಲಿ ನಡೆಯಿತು.

ಈ ರಾಲಿಯಲ್ಲಿ ಅನೇಕ ಚಿಂತಕರು ಪಾಲ್ಗೊಂಡಿದ್ದರು.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಮೂರ್ಖತನ ಎಂದು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಸಂಶೋಧಕ ಚಿದಾನಂದಮೂರ್ತಿ, ಭಾರತದಂತಹ ಸಹಿಷ್ಣುತಾ ದೇಶ ಮತ್ತೊಂದಿಲ್ಲ. ದೇಶದಲ್ಲಿ ಅಸಹಿಷ್ಣುತೆ ತಲೆದೋರಿದೆ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ಸರಿಯಲ್ಲ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ನನಗೂ ಸಂದಿದೆ ಆದರೆ ನಾನು ಅದನ್ನು ಹಿಂತಿರುಗಿಸುತ್ತಿಲ್ಲ. ಅಕಾಡೆಮಿಗಳು ಸ್ವಾಯತ್ತ  ಸಂಸ್ಥೆಯಾಗಿದ್ದು, ಈ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿವೆಯೇ ಹೊರತು ಕೇಂದ್ರ ಸರ್ಕಾರವಲ್ಲ ಎಂದರು.

Leave a Reply

Your email address will not be published. Required fields are marked *

You may have missed