ತಮಿಳುನಾಡಿಗೆ 15 ದಿನ 5,000 ಕ್ಯೂಸಸ್ ನೀರು ಬಿಟ್ಟರೆ ಕಾವೇರಿ ಅಚ್ಚುಕಟ್ಟು ರೈತರ ಮರಣ ಶಾಸನ; ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್
ಬೆಂಗಳೂರು: ತಮಿಳುನಾಡಿಗೆ 15 ದಿನ 5,000 ಕ್ಯೂಸಸ್ ನೀರು ಬಿಟ್ಟರೆ ಅದು ಕಾವೇರಿ ಅಚ್ಚುಕಟ್ಟು ರೈತರ ಮರಣ ಶಾಸನವಾಗುತ್ತದೆ. ಇದರಿಂದ ಆರು ಟಿ ಎಂ ಸಿ ನೀರು ಖಾಲಿಯಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಶೇಕಡ 64% ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ ಈಗಾಗಲೇ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. KRS 100 ಅಡಿಗೆ ಬಂದಿದೆ. ಕಬಿನಿ 72 ಅಡಿಗೆ ಇಳಿದಿದೆ. ಕುಡಿಯುವ ನೀರಿಗೂ ಸಂಕಷ್ಟ ಪಡುವ ಪರಿಸ್ಥಿತಿ ಇರುವಾಗ ಪ್ರಾಧಿಕಾರ ನೀರು ಬಿಡಲು ಹೇಗೆ ಸೂಚನೆ ನೀಡಿತು ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ.
s
ಇದು ಸರಿಯಾದ ಕ್ರಮ ಅಲ್ಲ. ಇದರ ವಿರುದ್ಧ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನ ಮನವಿ ಸಲ್ಲಿಸಲಿ. ನೀರು ಬಿಡಲು ಸಾಧ್ಯವಿಲ್ಲ ಎಂದು ಕಡಾ ಖಂಡಿತವಾಗಿ ಹೇಳಲಿ. ರಾಜ್ಯದ ರೈತರನ್ನು ರಕ್ಷಣೆ ಮಾಡಲಿ ಎಂದು ಕುರುಬೂರ್ ಶಾಂತಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯದ ಲೋಕಸಭಾ ಸದಸ್ಯರು ಧ್ವನಿಯತ್ತಬೇಕು ಕೇಂದ್ರ ಸರ್ಕಾರಕ್ಕೆ ರಾಜ್ಯದ ಕೂಗು ಸರಿಯಾಗಿ ತಲುಪಬೇಕು ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.