ಕಾವೇರಿ ನೀರಿಗಾಗಿ ಕರ್ನಾಟಕ ಬಂದ್: ದೊಡ್ಡಬಳ್ಳಾಪುರ ನಗರ ಸಂಪೂರ್ಣ ಸ್ತಬ್ಧ

Doddaballapur election police march

ದೊಡ್ಡಬಳ್ಳಾಪುರ: ವಿವಿಧ ಕನ್ನಡಪರ, ರೈತ, ದಲಿತ, ಪ್ರಗತಿ, ಕಾರ್ಮಿಕಪರ ಸಂಘಟನೆಗಳ ಒಕ್ಕೂಟದಿಂದ ಬಂದ್ ಗೆ ಬೆಂಬಲ ನೀಡಿ ಕಾವೇರಿ ನೀರನ್ನ ತಮಿಳುನಾಡಿಗೆ ಬಿಡದಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು.

ದೊಡ್ಡಬಳ್ಳಾಪುರ ನಗರದಾದ್ಯಂತ ಮೆಡಿಕಲ್, ನಂದಿನಿ ಪಾರ್ಲರ್ ಹೊರತುಪಡಿಸಿ ಎಲ್ಲಾ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಜನರಿಲ್ಲದೆ ಬಣಗುಡುತ್ತಿರುವ ಎಪಿಎಎಂಸಿ, ಕೆಆರ್ ಮಾರುಕಟ್ಟೆ, ಬಸ್ ನಿಲ್ದಾಣ, ಡಿ.ಕ್ರಾಸ್, ಅಂಬೇಡ್ಕರ್ ಸರ್ಕಲ್, ಜಿ.ರಾಮೇಗೌಡ ಸರ್ಕಲ್, ತಾಲ್ಲೂಕು ಆಫೀಸ್ ಸರ್ಕಲ್ ಸೇರಿದಂತೆ ನಗರ ಸಂಪೂರ್ಣ ಸ್ತಬ್ಧವಾಗಿದೆ.

ಚಿತ್ರಮಂದಿರಗಳಿಂದಳಿಂದಲೂ ಬಂದ್ ಗೆ ಬೆಂಬಲ, ಸೌಂದರ್ಯಮಹಲ್, ವೈಭವ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ. ಉಪನೋಂದಾಣಾಧಿಕಾರಿಗಳ ಕಚೇರಿ ಹೊರತುಪಡಿಸಿ ತಹಸೀಲ್ದಾರ್, ತಾಲ್ಲೂಕು ಪಂಚಾಯಿತಿ ಸೇರಿದಂತೆ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಸಹ ಬಂದ್ ಆಗಿವೆ.

You may have missed