ತಲೆಕೂದಲು ಸಮಸ್ಯೆ ನಿವಾರಣೆಗೆ ಹರಳೆಣ್ಣೆ

0

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬಾಲ್ಡ್ ನೆಸ್ ತುಂಬಾನೆ ಕಾಮನ್ ಸಮಸ್ಯೆ. ಇದರ ಪರಿಹಾರಕ್ಕೆ ತಲೆಕೆಡಿಸಿಕೊಂಡೆ ಅರ್ದ ಕೂದಲು ಉದುರಿಹೋಗುವುದು ಇದೆ. ಆದರೆ ತಲೆಕೂದಲು ಸಮಸ್ಯೆಗೆ ಹರಳೆಣ್ಣೆ ಅಂಗೈ ಜೌಷಧಿ. ಹರಳೆಣ್ಣೆಯಲ್ಲಿ ರಿಸಿನೋಲೈಕ್ ಆಸಿಡ್ ಹಾಗೂ ಪ್ಯಾಟಿ ಆಸಿಡ್ ಗಳು ಹೆಚ್ಚಾಗಿರುವುದರಿಂದ ತಲೆಕೂದಲ ಸಮಸ್ಯೆ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೋಟಿನ್, ಮಿನರಲ್ಸ್ ಮತ್ತು ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಶಕ್ತಿ ಇದೆ ಹೀಗಾಗಿ ಇದು ತಲೆಕೂದಲ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖವಾಗಿ ಪಾತ್ರವಹಿಸುತ್ತದೆ.

ರಕ್ತ ಚಲನೆಯನ್ನು ಹೆಚ್ಚಿಸುತ್ತದೆ
ಹರಳೆಣ್ಣೆ ಹಚ್ಚಿ ತಲೆಗೆ ನಿಧಾನವಾಗಿ ಮಸಾಜ್ ಮಾಡುವುದರಿಂದ ತಲೆಭಾಗದಲ್ಲಿ ರಕ್ತಚಲನೆ ಹೆಚ್ಚುತ್ತದೆ. ಇದರಿಂದ ಕೂದಲ ಬುಡದಲ್ಲಿ ಹೆಚ್ಚಿನ ರಕ್ತಚಲನೆಯಾಗಿ ಕೂದಲು ಬೆಳೆಯಲು ಅನುಕೂಲವಾಗುತ್ತದೆ.

ತಲೆಕೂದಲು ಉದುರುವುದನ್ನು ತಡೆಯುತ್ತದೆ
ತಲೆಕೂದಲು ಉದುರುವುದನ್ನು ತಡೆಯಲು ಹರಳೆಣ್ಣೆ ಉತ್ತಮ ಜೌಷಧಿ. ನೆತ್ತಿಯಲ್ಲಿ ಆಗುವ ಫಂಗಸ್ ಇನ್ಫೆಕ್ಷನ್ ನಿಂದಾಗಿ ತಲೆಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸ್ಪಲ್ಪ ಬಿಸಿ ಮಾಡಿದ ಹರಳೆಣ್ಣೆಯನ್ನು ನೆತ್ತಿಗೆ ಹಚ್ಚುವುದರಿಂದ ರಿಂಗ್ ವರ್ಮ್, ಸೇರಿದಂತೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅಲ್ಲದೆ ಕೂದಲು ಉದುರುವುದು ನಿಯಂತ್ರಣಕ್ಕೆ ಬರುತ್ತದೆ..

ಸ್ಲಿಟ್ ಎಂಟ್ ನಿವಾರಣೆಗೆ
ಕೆಲವರ ಕೂದಲಿನ ತುದಿ ಎರಡು ಭಾಗವಾಗಿ ಇರುತ್ತದೆ. ಹಲವು ಸಂದರ್ಭಗಳಲ್ಲಿ ಇಂತಹ ಸಮಸ್ಯೆ ಮುಜುಗರಕ್ಕೂ ಕಾರಣವಾಗುತ್ತದೆ. ಹೀಗಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಹರಳೆಣ್ಣೆಯನ್ನು ಬಳಸುವುದು ಉತ್ತಮ
ಕೊಂಚ ಮಂದವಾಗಿರುವುದರಿಂದ ಹರಳೆಣ್ಣೆಯನ್ನು ಬಳಸಲು ಕಷ್ಟವಾಗಬಹುದು. ಹೀಗಾಗಿ ಇತರ ಪ್ರಾಕೃತಿಕ ಎಣ್ಣೆಗಳಾದ ತೆಂಗಿನ ಎಣ್ಣೆ ಅಥವ ಆಲಿವ್ ಎಣ್ಣೆಯೊಂದಿಗೆ ಸೇರಿಸಿ ಹರಳೆಣ್ಣೆಯನ್ನು ಬಳಸಬಹುದು.

 

Leave a Reply

Your email address will not be published. Required fields are marked *

You may have missed