BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯ ಗಮನಸೆಳೆದಿದೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸುಮಾರು 27,000 ಅಧಿಕಾರಿ /ನೌಕಕರು ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ಅಧಿಕಾರಿ/ನೌಕರರ ಭವಿಷ್ಯನಿದಿ/ಐಚ್ಛಿಕ ಭವಿಷ್ಯನಿಧಿ ಮಾಹೆಯಾನ ವಂತಿಗೆಗಳ ಮಾಹಿತಿಯನ್ನು ಈ ಹಿಂದೆ ಮುದ್ರಿತ ಚೀಟಗಳ ರೂಪದಲ್ಲಿ ಮುದ್ರಿಸಿ ಪ್ರತಿ ನೌಕರರಿಗೆ ವಾರ್ಷಿಕವಾರು ವಿತರಿಸಲಾಗುತ್ತಿತ್ತು.
2022-2023 ನೇ ಸಾಲಿನಿಂದ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಬಳಸಿ ಆಂತರಿಕವಾಗಿಯೇ ಗಣಕ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ems.mybmtc.com/pf ತಂತ್ರಜ್ಞಾನದಲ್ಲಿ ಆನ್ಲೈನ್ ನಲ್ಲಿಯೇ ಪ್ರತಿ ನೌಕರನು ತನ್ನ ಮೊಬೈಲ್ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನ ನಮೂದಿಸಿ ಆತನ ಖಾತೆಯಲ್ಲಿರುವ ಪಿ.ಎಫ್ ಮೊತ್ತ, ವಿ.ಪಿ.ಎಫ್ ಮೊತ್ತ, ಬಡ್ಡಿ ಮೊತ್ತ, ಮುಂಗಡಗಳ ವಿವರಗಳು (ಪ್ರಾರಂಭಿಕ/ಅಂತಿಮ ಶಿಲ್ಲುಗಳೊಂದಿಗೆ) ವೀಕ್ಷಿಸಲು ಅವಕಾಶ ಇದೀಗ ಕಲ್ಪಿಸಲಾಗಿದೆ.
ಪ್ರಸ್ತುತ 2023-2024 ಸಾಲಿನಲ್ಲಿ ಲೆಕ್ಕಪತ್ರ ಇಲಾಖೆಯ ಭವಿಷ್ಯನಿಧಿ ಶಾಖೆಯಿಂದ ಮೇಲಿನ ನವೀಕೃತ ತಂತ್ರಾಂಶದ ಸಹಯೋಗದೊಂದಿಗೆ ಪ್ರತಿ ನೌಕರನ ಮಾಹೆಯಾನ ಭವಿಷ್ಯನಿಧಿಯ ಸಂಸ್ಥೆಯ ಹಾಗೂ ನೌಕರನ ವಂತಿಗೆ ಮೊತ್ತ, ಬಡ್ಡಿ ಮೊತ್ತ, ಮುಂಗಡಗಳ ವಿವರ, ಅಂತಿಮ ಅಭ್ಯರ್ಥನ ಹಾಗೂ ಅಂತಿಮ ಶಿಲ್ಕುಗಳನ್ನು ವಿವರವಾಗಿ ಖುದ್ದು ಪರಿಶೀಲಿಸಿ, ತಾಳೆ ಮಾಡಿ ದೃಢೀಕರಿಸಲಾಗಿರುತ್ತದೆ. ಈ ರೀತಿ ಅಂತಿಮವಾಗಿ ದೃಢೀಕರಿಸಿರುವ ಸುಮಾರು 27,000 ಭವಿಷ್ಯ ನಿದಿ ಹಾಗೂ ಸುಮಾರು 6,000 ಐಜ್ಜಿಕ ಭವಿಷ್ಯ ನಿಧಿ ಚೀಟಗಳನ್ನು ems.mybmtc.com/pf ತಂತ್ರಾಂಶದಲ್ಲಿ ಅಂತಿಮವಾಗಿ ಅಳವಡಿಸಲಾಗಿದೆ. ಈ ಸೌಲಭ್ಯದಿಂದ ಪ್ರತಿ ನೌಕರರು ತಮ್ಮ ಮೊಬೈಲ್ನಲ್ಲಿಯೇ ತಮ್ಮ ಬಿಡುವಿನ ವೇಳೆಯಲ್ಲಿ ಆತನ ಖಾತೆಯಲ್ಲಿರುವ ಭವಿಷ್ಯ ನಿಧಿ ವಿವರಗಳನ್ನ ಖುದ್ದು ವೀಕ್ಷಿಸಿ, ಪ್ರತಿಯನ್ನು ಮುದ್ರಿಸಿಕೊಳ್ಳ ಬಹುದಾಗಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಅವರು ಗುರುವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 27,000 ನೌಕರರ 2023-2024 ನೇ ಸಾಲಿನ ಭವಿಷ್ಯ ನಿಧಿ ಹಾಗೂ 6000 ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಗಳನ್ನು ems.mybmtc.com ಅಂತರ್ಜಾಲದಲ್ಲಿ ವೀಕ್ಷಿಸಲು ಸೌಲಭ್ಯವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಶಿಲ್ಪ, ಎಂ,, ಮಖ್ಯ ಲೆಕ್ಕಾಧಿಕಾರಿ ಮಂಜುಶ್ರೀ. ಆರ್, ಮುಖ್ಯ ಗಣಕ ವ್ಯವಸ್ಥಾಪಕ ಸದಾನಂದ ಕೆ.ಜಿ ಪ್ರಿಯಾಂಕ.ಎ, ಅಧಿಕಾರಿಗಳಾದ ಅರುಣ್ ಕುಮಾರ್ ಟಿ.ಎಲ್ ಸೇರಿದಂತೆ ಅನೇಕ ಗಣ್ಯರು ಉಪಾಸದಥಿತರಿದ್ದರು.