ಬಿಜೆಪಿಯಲ್ಲಿ ರಣೋತ್ಸಾಹ.. ಸಾಮಾನ್ಯ ಕಾರ್ಯಕರ್ತನಾಗಿ ನಳಿನ್ ಸವಾರಿ..

0
nalin-kumar

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಣೋತ್ಸಾಹ. ಮಲೆನಾಡು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕರು ಭರ್ಜರಿ ಸವಾರಿ ಕೈಗೊಂಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರು ಚಿಕ್ಕಮಗಳೂರಿನಲ್ಲಿ ಪಕ್ಷದ ಸರಣಿ ಸಭೆ ಕೈಗೊಂಡಿದ್ದು ಮುಂಬರುವ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ.

 ಬಿಜೆಪಿಯ ವಿಜಯದ ಸಂಕಲ್ಪದೊಂದಿಗೆ ಸಮಾವೇಶಗಳು ನಡೆಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಸಾಗಿರುವ ಅಭಿಯಾನವೂ ಕಾರ್ಯಕರ್ತರಲ್ಲಿ ಸಂಚಲನ ಮೂಡಿದೆ. ಪಕ್ಷದ ದಂಡನಾಯಕ ನಳಿನ್ ಕುಮಾರ್ ಕಟೀಲ್ ಅವರು ಇಂದು ಬೆಳ್ಳಂ ಬೆಳಿಗ್ಗೆಯೇ ಕಾರ್ಯಕರ್ತರ ತಂಡಗಳೊಂದಿಗೆ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಕಮಲ ಸೇನಾನಿಗಳು ಮನೆ ಮನೆಗಳಿಗೆ ಭೇಟಿ ನೀಡಿ ಪಕ್ಷದ ತತ್ವ ಸಿದ್ದಾಂತ ಬಗ್ಗೆ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. 

ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಜೊತೆ ನಳಿನ್ ಕುಮಾರ್ ಅವರೇ ಮನೆ ಮನೆ ಭೇಟಿ ಕೈಗೊಂಡು ಗಮನಸೆಳೆದರು. ‘ವಿಜಯ ಸಂಕಲ್ಪ’ದ ಭಾಗವಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರದಲ್ಲಿ ಮನೆಮನೆಗೆ ನಮ್ಮ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ, ಪಕ್ಷದ ಸ್ಟಿಕರ್ ಅಂಟಿಸುವ ಮೂಲಕ ಕಾರ್ಯಕರ್ತರೂ ರಣೋತ್ಸಾಹ ಪ್ರದರ್ಶಿಸಿದ್ದಾರೆ.

 

Leave a Reply

Your email address will not be published. Required fields are marked *