ಹೀನಾಯ ಸೋಲಿನ ಪ್ರತಿಧ್ವನಿ; ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಖಚಿತ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪೀ.ನಡ್ಡಾ ಸಹಿತ ಘಟಾನುಘಟಿ ನಾಯಕರು ಶಕ್ತಿ ಮೀರಿ ಪ್ರಚಾರ ಕೈಗೊಂಡರೂ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಬೊಮ್ಮಾಯಿ ಅವರ ಕಳಪೆ ಸರ್ಕಾರ, ಭ್ರಷ್ಟಾಚಾರ ಆರೋಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಳಪೆ ಸಂಘಟನೆ ಕಾರಣ ಎಂದು ವಿಶ್ಲೇಶಿಸಲಾಗುತ್ತಿದೆ.
ಸಾ ಇದರಲ್ಲಿ ಕಾರ್ಯಕರ್ತರುಹೋಣೆಗಾರರಲ್ಲಾ ನಳಿನ್ ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೋಡಲೇ ಬೆಕು ಮತ್ತೆ ಒಬ್ಬ ಖಡಕ್ ವಿರೋಧ ಪಕ್ಷದ ನಾಯಕ ಬೆಕು ಮತ್ತೆ ಮತ್ತೆ ಪಕ್ಷಸಂಘಟಿಸುವ ನಿಷ್ಠಾವಂತ ಹಾಗೂ ಯೋಗಿಜೀ ತರ ನಾಯಕ ಬೆಕು ಅಷ್ಟೇ ಯಾಕೆ ಬಿಜೆಪಿ ಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೋಡೋ ಸಂಪ್ರದಾಯ ಇಲ್ಲವೇ
— jk gowda (@Jayakumaragowd1) May 15, 2023
ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಂತೂ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ. ನಳಿನ್ ತವರು ಪುತ್ತೂರಿನಲ್ಲಂತೂ ಪೋಸ್ಟರ್ ಅಭಿಯಾನ ತೀವ್ರಗೊಂಡಿದ್ದು ಈ ಬೆಳವಣಿಗೆ ಬಿಜೆಪಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ನಳಿನ್ OK.
ಸ್ಮೈಲ್ ಗೌಡ್ರು ಯಾಕೆ?? pic.twitter.com/bwu9oqo82H— 👑Che_ಕೃಷ್ಣ🇮🇳💛❤️ (@ChekrishnaCk) May 15, 2023
ಈ ನಡುವೆ, ಕಳಪೆ ಆಡಳಿತ ಕಾರಣಕ್ಕೆ ಬಸವರಾಜ್ ಬೊಮ್ಮಾಯಿಯವರು ತಾವಾಗಿ ಅಧಿಕಾರ ಕಳೆದುಕೊಂಡರೆ, ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಲೆದಂಡಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಪ್ರಲ್ಹಾದ್ ಜೋಷಿ ಸುಳಿವು;
ರಾಜ್ಯ ಬಿಜೆಪಿಯ ವಿದ್ಯಮಾನಗಳಲ್ಲಿ ಪ್ರಮುಖ ಜವಾಬ್ಧಾರಿ ನಿರ್ವಹಿಸುತ್ತಾ ಬಂದಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತಲೆದಂಡ ಕುರಿತು ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಬದಲಾವಣೆ ಸಾಧ್ಯತೆ ಕುರಿತು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಪೂರೈಸಿದ್ದರೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಮತ್ತೆ ಅವರಿಗೆ ಜವಾಬ್ದಾರಿ ನೀಡಿದ್ದರು. ಈಗ ಚುನಾವಣೆ ಮುಗಿದಿದೆ. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆಂದು ಜೋಷಿ ಹೇಳಿದರು.