ಹೊಟ್ಟೆ ಭಾಗದ ಕೊಬ್ಬು ಕರಗಿಸಬೇಕು, ವರ್ಕ್ ಔಟ್ ಗೆ ಟೈಂ ಇಲ್ಲ..? ಚಿಂತೆ ಬಿಡಿ ಇಲ್ಲಿದೆ ಹೋಮ್ ಮೇಡ್ ಜ್ಯೂಸ್
ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕೊಬ್ಬು ಹೆಚ್ಚಾಗಿ ಶೇಖರಣೆಯಾಗುವ ಭಾಗ ಎಂದರೆ ಹೊಟ್ಟೆ. ಇದು ತುಂಬಾ ಅಪಾಯಕಾರಿ ಕೂಡ ಹೌದು. ಅನೇಕ ರೋಗಗಳಿಗೆ ಮೂಲವಾಗುವ ಈ ಹೊಟ್ಟೆಯಲ್ಲಿನ ಕೊಬ್ಬು ಕರಗಿಸುವುದು ಅಂದುಕೊಂಡಷ್ಟು ಸುಲಭವೂ ಅಲ್ಲ. ಒಮ್ಮೆ ಯಾಮಾರಿದರೆ ಜೀವನ ಪೂರ್ತಿ ಇದಕ್ಕಾಗಿ ಶ್ರಮ ಪಡಬೇಕಾಗುತ್ತದೆ. ಕೆಲವರಂತೂ ಹೊಟ್ಟೆ ಕರಗಿಸಲು ತೆಗೆದುಕೊಳ್ಳದ ಜೌಷದಿಯಿಲ್ಲ. ಮಾಡದ ಕಸರತ್ತಿಲ್ಲ.
ಹೊಟ್ಟೆಯ ಬೊಜ್ಜು ಹೃದಯ ಸಂಬಂಧಿ ಕಾಯಿಲೆ, ಹೈಪರ್ ಟೆನ್ಷನ್, ಜೀರ್ಣಕ್ರಿಯೆಯಲ್ಲಿ ತೊಂದರೆ, ಅಸ್ತಮಾ, ಅಲ್ ಜೈಮರ್ , ಬಂಜೆತನ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಮಹಿಳೆಯರು ಹಾಗೂ ಪುರುಷರಿಗೆ ತಂದೊಡ್ಡುತ್ತದೆ. ಹೀಗಾಗಿ ಬೊಚ್ಚು ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಕೂಡಲೇ ನೀವು ನಿಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿ. ಸಿಹಿ ಪದಾರ್ಥಗಳ ಸೇವನೆಯನ್ನು ಕೂದಲೆ ಕಡಿತಗೊಳಿಸಿ. ಹೆಚ್ಚಾಗಿ ನೀರು ಕುಡಿಯಿರಿ ಹಾಗೂ ಸರಿಯಾಗಿ ನಿದ್ರೆ ಮಾಡಿ. ವಿಟಮಿನ್ , ಕಬ್ಬಿಣದ ಅಂಶ, ರೋಗನಿರೋಧಕ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.
ಇನ್ನೂ ಪಾಲಕ್ ಸೊಪ್ಪು, ಶುಂಠಿ ಮತ್ತು ನಿಂಬೆಹಣ್ಣು ಹೊಟ್ಟೆ ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಲ್ಲಿ ಹೆಚ್ಚನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಹೊಟ್ಟೆಯಲ್ಲಿನ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. 1 ನಿಂಬೆಹಣ್ಣು, ಒಂದು ಹಿಡಿ ಪಾಲಕ್ ಸೊಪ್ಪು, ಒಂದು ಗ್ಲಾಸ್ ನೀರು ಮತ್ತು ಹೆಬ್ಬರಳ ಗಾತ್ರದ ಶುಂಠಿ. ಇವುಗಳನ್ನು ಸೇರಿಸಿ ಜ್ಯೂಸ್ ತಯಾರಿಸಿ, ಬೆಳಗ್ಗೆ ಬರೀ ಹೊಟ್ಟೆಗೆ ಸೇವಿಸಿ. 30 ನಿಮಿಷಗಳ ನಂತರ ಬೆಳಗ್ಗಿನ ಉಪಹಾರ ಸೇವಿಸಿ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆ ಕರಗಿ, ಸ್ಲೀಮ್ ಆಂಡ್ ಟ್ರೀಮ್ ಕಾಣುವಿರಿ. ಅಷ್ಟೇ ಅಲ್ಲಿ ಲವಲವಿಕೆಯಿಂದ ಕಂಗೊಳಿಸುವಿರಿ…