ಬಿಬಿಎಂಪಿ ಪೌರಕಾರ್ಮಿಕರ ಖಾಯಂಗೆ ಕ್ರಮ; ಒಂದೆರಡು ವಾರದಲ್ಲಿ ಅಧಿಸೂಚನೆ ಸಾಧ್ಯತೆ
ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ಖಾಯಂಗೆ ಸರ್ಕಾರ ಸಮ್ನತಿಸಿದ್ದು ಒಂದೆರಡು ವಾರದಲ್ಲಿ ಮಂಜೂರಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ 4 ದಿನಗಳ ಮುಷ್ಕರದಲ್ಲಿ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಮುಖ್ಯಮಂತ್ರಿಗಳು ನೀಡಿದ್ದ ಲಿಖಿತ ಭರವಸೆಯಂತೆ, ಎಲ್ಲಾ ಪೌರಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂಬ ಹಾಕ್ಕೋತ್ತಾಯದೊಂದಿಗೆ ಈತಿಂಗಳ 27ರಿಂದ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆ (ಎಐಸಿಸಿಟಿಯು) ಹೋರಾಟ ನಡೆಸುತ್ತಿತ್ತು. ಬಿಬಿಎಂಪಿಯಲ್ಲಿ ಸುಮಾರು 16000 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕೇವಲ 3673 ಕಾರ್ಮಿಕರನ್ನು ಮಾತ್ರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಉಳಿದ ಸುಮಾರು 12500 ಪೌರಕಾರ್ಮಿಕರಿಗೆ ಅನ್ಯಾಯ ಎಸಗಲಾಗಿದ್ದನ್ನು ಖಂಡಿಸಲಾಗಿತ್ತು.
ಈ ನಡುವೆ ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್ ರೈಪುರ್ ಪ್ರತಿಭಟನಾ ನಿರತ ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತಾನಾಡಿದರು. ಈಗಾಗಲೇ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಕ್ಕೆ ಸಂಬಂಧಿಸಿದಂತ ಖಡತವು ಮುಖ್ಯಮಂತ್ರಿಗಳ ಪರಿಶೀಲನೆಯಲ್ಲಿದ್ದು, ಒಂದೆರೆಡು ದಿನಗಳಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದರು. ಒಂದೆರಡು ವಾರದೊಳಗೆ, ಮಂಜೂರಾತಿ ಅಧಿಸೂಚನೆ ಹೋರಡಿಸಲಾಗುವುದೆಂದು ಹಾಗೂ ಪ್ರಸ್ತುತ ಚಾಲನೆಯಲ್ಲಿರುವ 3,673 ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು, ಎಲ್ಲಾ 16000 ಪೌರಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಗೊಳಿಸುವುದಾಗಿ ತಿಳಿಸಿದರು.
ಸದ್ಯದ ಭರವಸೆಯಂತೆ ಹೋರಾಟವನ್ನು ಹಿಂಪಡೆಯಲಾಗಿದೆ. ಈಗಿನ ಭರವಸೆಯಂತೆ ಸರ್ಕಾರ ಎಲ್ಲಾ ಪೌರಕಾರ್ಮಿಕರ ಖಾಯಾಮಾತಿಗೆ ಒಂದೆರೆಡು ವಾರದೊಳಗೆ ಮಂಜೂರಾತಿ ಅಧಿಸೂಚನೆ ಹೊರಡಿಸದೆ ಹೋದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ನಿರ್ಮಲಾ ಎಂ ತಿಳಿಸಿದ್ದಾರೆ.