ಬಂಬೂ ವೆಜ್ ಬಿರಿಯಾನಿ.. ಸ್ವಾದ ಹೇಗಿದೆ ಗೊತ್ತಾ?
ತರಕಾರಿಯಲ್ಲಿ ಹಲವಾರು ಬಗೆಯ ಬಿರಿಯಾನಿ ಮಾಡಬಹುದು. ನಳ ಪಾಕ ಪ್ರವೀಣರು ‘ಬಿದಿರು ತರಕಾರಿ ಬಿರಿಯಾನಿ’ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ‘ಬಿದಿರು ತರಕಾರಿ ಬಿರಿಯಾನಿ’ ಘಮಿಸುವ ಸುವಾಸಾಸನೆಯ ಜೊತೆ ಸ್ವಾದಿಷ್ಟ ರುಚಿಯೂ ಹೌದು. ಇದನ್ನು ಮಾಡುವ ವಿಧಾನವೂ ಸುಲಭ..
- ಈರುಳ್ಳಿ 1 ವರೆ ಕಪ್
- ಟೊಮ್ಯಾಟೋ 2 ಕಪ್
- ಬೀನ್ಸ್ 1 ವರೆ ಕಪ್
- ಕ್ಯಾರೆಟ್ 1 ಕಪ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
- ಪುದಿನ ಸೊಪ್ಪು 1 ಕಪ್
- ಕೊತ್ತಂಬರಿ ಸೊಪ್ಪು 1 ಕಪ್
- ಬಿರಿಯಾನಿ ಹುಡಿ 2 ಚಮಚ
- ಲವಂಗ 5
- ಏಲಕ್ಕಿ 2
- ಚೆಕ್ಕೆ 1 ಚಮಚ
- ನಕ್ಷತ್ರ ಹೂ 1
- ಕಾಯಿ ಮೆಣಸು 2
- ಲಿಂಬೆ ರಸ 3 ಚಮಚ
- ತುಪ್ಪ 5 ಚಮಚ
- ಎಣ್ಣೆ ಅರ್ಧ ಕಪ್
- ಕಲ್ಲುಪ್ಪು 2 ಚಮಚ
- ಅರಿಶಿನ ಹುಡಿ 1 ಚಮಚ
- ಅಕ್ಕಿ 2 ಕಪ್
- ನೀರು 6 ಕಪ್
ಮಾಡುವ ವಿಧಾನ
ಮೊದಲಿಗೆ 1 ಫೀಟ್ ಉದ್ದದ ಬಿದಿರನ್ನು ಆರಿಸಿ ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಈರುಳ್ಳಿ, ಬೀನ್ಸ್, ಕ್ಯಾರೆಟ್, ಟೊಮ್ಯಾಟೋ, ಕಾಯಿ ಮೆಣಸು ಎಲ್ಲವನ್ನು ಹಚ್ಚಿ ಇಡಬೇಕು. ಒಂದು ಕಾಡಾಯಿ ಅಲ್ಲಿ ತುಪ್ಪ , ಎಣ್ಣೆ ಈರುಳ್ಳಿ, ಲವಂಗ , ಏಲಕ್ಕಿ, ಚೆಕ್ಕೆ, ನಕ್ಷತ್ರ ಹೂ ಹಾಕಿ ಚೆನ್ನಾಗಿ ಬಾಡಿಸಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಯಿಮೆಣಸು, ಟೊಮ್ಯಾಟೋ ಹಾಕಿ ಬಾಡಿಸಿ. ನಂತರ ಅದಕ್ಕೆ ಬೀನ್ಸ್, ಕ್ಯಾರೆಟ್, ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಅರಿಶಿನ, ಬಿರಿಯಾನಿ ಹುಡಿ, ನಿಂಬೆ ರಸ, ಉಪ್ಪು ಹಾಕಿ ಕಲಸಿ. ಮತ್ತೆ ಅಕ್ಕಿ ಹಾಕಿ ಚೆನ್ನಾಗಿ ಕಲಸಿ. ಈಗ ಸ್ವಚ್ಛ ಮಾಡಿದ ಬಿದಿರನ್ನು ತೆಗೆದು ಅದಕ್ಕೆ ತಾಯಾರು ಮಾಡಿಕೊಂಡ ಬಿರಿಯಾನಿ ಅಕ್ಕಿ ಹಾಕಿ ನೀರು ಹಾಕಿ ಬಾಳೆಯ ಸಹಾಯದಿಂದ ಚೆನ್ನಾಗಿ ಮುಚ್ಚಬೇಕು.
ಒಂದು ಒಲೆಯನ್ನು ಸಿದ್ಧಮಾಡಿಕೊಳ್ಳಿ. ಒಲೆಗೆ ಬೆಂಕಿ ಹಾಕಿ ಕೆಂಡ ಸಿದ್ದಮಾಡಿಕೊಳ್ಳಬೇಕು. ಇದರಲ್ಲಿ ಆ ತುಂಬಿಸಿದ ಬಿದಿರನ್ನು ಕೆಂಡದಲ್ಲಿ 40-45 ನಿಮಿಷ ಇಟ್ಟರೆ ರುಚಿಯಾದ ಬಿದಿರಿನ ತರಕಾರಿ ಬಿರಿಯಾನಿ ಸಿದ್ಧವಾಗುತ್ತದೆ.