ಅಯೋಧ್ಯೆ ಪ್ರತಿಷ್ಠೋತ್ಸವ; ಮಣಿಪಾಲದಲ್ಲಿ ದೀಪೋತ್ಸವ ವೈಭವ

0
manipal - Dasharath Nagar- Deepotsava

ಮಣಿಪಾಲ: ಅಯೋಧ್ಯೆ ಶ್ರೀರಾಮ ದೇಗುಲದಲ್ಲಿ ಬಾಲರಾಮನ ಪ್ರತಿಷ್ಠೋತ್ಸವದ ವಾರ್ಷಿಕೋತ್ಸವವನ್ನು ದೇಶದೆಲ್ಲೆಡೆ ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಗಿದೆ. ಇದೇ ವೇಳೆ ಉಡುಪಿ ಜಿಲ್ಲೆ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮ ಗಮನಸೆಳೆದಿದೆ.

ಮಣಿಪಾಲದ ದಶರಥನಗರದ ಶಿವಾಣಿ ಆರ್ಕಿಡ್ ಬಳಿ ದೀಪೋತ್ಸವ ವೈಭವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಆಸ್ತಿಕರು ಭಾಗಿಯಾದರು.

ಇದೇ ವೇಳೆ, ತೇಜಸ್ವಿನಿ ಅನಿಲ್ ರಾಜ್ ರವರ ಶ್ರೀ ರಾಮ ಭಕ್ತಿ ಗಾಯನ ಕಾರ್ಯಕ್ರಮ ಭಕ್ತಸಮೂಹ ಆಸ್ತಿಕರ ಗಮನಕೇಂದ್ರೀಕರಿಸಿತು. ರಾಮ ಲಕ್ಷ್ಮಣ ಸೀತಾ ಹಾಗು ಹನುಮಾನ್ ಪ್ರತಿಮೆ ಪ್ರದರ್ಶನಾವೂ ಕುತೂಹಲದ ಕೇಂದ್ರಬಿಂದುವಾಯಿತು. ರಾಮಾಯಣದ ಬಗ್ಗೆ ರಸ ಪ್ರಶ್ನೆ, ಕುಣಿತ ಭಜನೆ, ಕ್ರೇಜಿ ಕಿಡ್ಸ , ಪರ್ಕಳ ಇವರ ನೃತ್ಯ ಕಾರ್ಯಕ್ರಮಗಳು ಈ ಭಕ್ತಿ ಸಮಾರಂಭಕ್ಕೆ ಆಕರ್ಷಣೆಯನ್ನೂ ತುಂಬಿತು.

ಉದ್ಯಮಿಗಳಾದ ರಾಧಾಕೃಷ್ಣ, ಸಂದೇಶ್ ಕುಮಾರ್ ಹಾಗೂ ಸ್ಥಳೀಯ ಪ್ರಮುಖರರಾದ ಸಚ್ಚೀಂದ್ರ ಅಂಬಾಗಿಲು, ಕುಮಾರಿ ವೈಷ್ಣವಿ ನಾಯಕ್ ಸಹಿತ ಹಲವರ ಸಹಭಾಗಿತ್ವದಲ್ಲಿ ಸಮಾರಂಭ ಅರ್ಥಪೂರ್ಣವಾಗಿ ನೆರವೇರಿತು.

Leave a Reply

Your email address will not be published. Required fields are marked *

You may have missed