ಜೈನಕಾಶಿಯ ಆಲ್ವಾಸ್ ಕ್ಯಾಂಪಸ್ ನಲ್ಲಿ “ಮಿನಿ ಭಾರತ”
ದಕ್ಷಿಣಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ನಡೆದ 70 ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ರಾಜ್ಯದ ಪಾಲಿಗೆ ದಾಖಲೆ ಎಂಬಂತಿತ್ತು.
ಆಲ್ವಸ್ ವಿರಾಸತ್, ಆಲ್ವಸ್ ನುಡಿಸಿರಿ ಮೂಲಕ ಕನ್ನಡ ಐಸಿರಿಯನ್ನು ಜಗತ್ತಿನ ಉದ್ದಗಲಕ್ಕೂ ಸಾರುತ್ತಿರುವ ಮೂಡಬಿದಿರಿಯ ಆಲ್ವಸ್ ಶಿಕ್ಷಣ ಸಂಸ್ಥೆ ಇದೀಗ ದೇಶ ಪ್ರೇಮದ ಹಬ್ಬ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲೂ ಹೊಸತನದ ಸನ್ನಿವೇಶ ಸೃಷ್ಟಿಸಿ ದೇಶದ ಗಮನ ಸೆಳೆಯಿತು.
ಜೈನಕಾಶಿ ಮೂಡಬಿದರೆ ಸಮೀಪದ ಪುತ್ತಿಗೆ ಬಯಲಲ್ಲಿ ಸುಮಾರು 35 ಸಾವಿರ ಮಂದಿ ರಾಷ್ಟ್ರ ಧ್ವಜದ ಚಿತ್ರಣ ಮೂಡುವ ರೀತಿಯಲ್ಲಿ ಉಡುಗೆ ತೊಟ್ಟು ಅಲ್ಲಿ ಜಮಾಯಿಸಿದ್ದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು, ಸುಮಾರು 35 ಸಾವಿರ ಮಂದಿ ಏಕ ಕಾಲದಲ್ಲಿ ಧ್ವಜ ರಾರಾಜಿಸುವಂತೆ ಮಾಡಿದ ಸನ್ನಿವೇಶ ಕಣ್ಣಿಗೆ ಹಬ್ಬದಂತಿತ್ತು.