‘AI ಶೃಂಗಸಭೆ ಭಾರತದ ಸಾಮರ್ಥ್ಯಗಳನ್ನು ಜಗತ್ತು ಶ್ಲಾಘಿಸಿದೆ’ ಎಂದ ಪ್ರಧಾನಿ ಮೋದಿ

0
Narendra Modi -Oath as PM

ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ಇತ್ತೀಚೆಗೆ ನಡೆದ ‘AI ಇಂಪ್ಯಾಕ್ಟ್ ಶೃಂಗಸಭೆ–2026’ ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ಅವರು, ದೆಹಲಿಯಲ್ಲಿ ನಡೆದ ಐತಿಹಾಸಿಕ AI ಶೃಂಗಸಭೆಯಲ್ಲಿ ಇಡೀ ಜಗತ್ತು ಭಾರತದ ಸಾಮರ್ಥ್ಯಗಳನ್ನು ಪೂರ್ಣ ಹೃದಯದಿಂದ ಶ್ಲಾಘಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರ ಚಿಂತನೆ ಮಾನವೀಯತೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂಬುದನ್ನು ಇದು ತೋರಿಸಿದೆ ಎಂದು ಹೇಳಿದ್ದಾರೆ.

ಫೆಬ್ರವರಿ 16ರಿಂದ 20ರವರೆಗೆ ನಡೆದ ಈ ಶೃಂಗಸಭೆ ಮಾನವಕೇಂದ್ರಿತ AI, ಜಾಗತಿಕ ಸಹಕಾರ ಹಾಗೂ ನೈತಿಕ ಚೌಕಟ್ಟುಗಳ ಕುರಿತ ಚರ್ಚೆಗೆ ವೇದಿಕೆಯಾಯಿತು. ಜಾಗತಿಕ ನಾಯಕರು, ತಂತ್ರಜ್ಞಾನ ತಜ್ಞರು, ಉದ್ಯಮಿಗಳು ಮತ್ತು ನವೋದ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ, AI ಶೃಂಗಸಭೆ ಭವಿಷ್ಯದಲ್ಲಿ ಜಗತ್ತು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರಲ್ಲಿ ಮಹತ್ವದ ತಿರುವು ಎಂದು ಹೇಳಿದರು. ಪ್ರದರ್ಶನ ವಿಭಾಗದಲ್ಲಿ ಅನೇಕ ನವೀನ ಆವಿಷ್ಕಾರಗಳನ್ನು ವಿಶ್ವ ನಾಯಕರಿಗೆ ಪರಿಚಯಿಸಿದ್ದಾಗಿ ತಿಳಿಸಿದರು.

ಉದಯೋನ್ಮುಖ ತಂತ್ರಜ್ಞಾನಗಳನ್ನು ಮಾನವೀಯ ಹಿತಕ್ಕಾಗಿ ಬಳಸಲು ಸಂಶೋಧನೆ, ಪ್ರಯೋಗ ಹಾಗೂ ನೈತಿಕ ಜವಾಬ್ದಾರಿಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

Leave a Reply

Your email address will not be published. Required fields are marked *

You may have missed