ಬಾಲಿವುಡ್‌ ನಟ ಅಖಿಲ್ ಮಿಶ್ರಾ ವಿಧಿವಶ

ಮುಂಬಯಿ: ಬಾಲಿವುಡ್‌ ನಟ ಅಖಿಲ್ ಮಿಶ್ರಾ ವಿಧಿವಶರಾಗಿದ್ದಾರೆ. ಜಾರಿ ಬಿದ್ದು ಗಾಯಗೊಂಡಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
58 ವರ್ಷ ಹರೆಯದ ಅಖಿಲ್ ಮಿಶ್ರಾ ಅವರು, ಆಮಿರ್‌ ಖಾನ್‌ ಅಭಿನಯದ ʼಥ್ರೀ ಈಡಿಯಟ್ಸ್ʼ ಸಹಿತ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

You may have missed