ರಾಜಸ್ಥಾನದಲ್ಲಿ ಗಮನ ಸೆಳೆದ ಪುಷ್ಕರ ಜಾತ್ರೆ

ಪುಷ್ಕರ ಜಾತ್ರೆ. ರಾಜಸ್ಥಾನದಲ್ಲಿ ನಡೆಯುವ ಅತೀ ದೊಡ್ಡ ಜಾತ್ರೆಗಳಲ್ಲಿ ಇದು ಒಂದು. ಅಲ್ಲದೆ ವಿಶ್ವದ ಅತೀ ದೊಡ್ಡ ಒಂಟೆ ಜಾತ್ರೆ ಇದಾಗಿದೆ. ಈ ವಿಶಿಷ್ಟ ಜಾತ್ರೆಗಳನ್ನು ನೋಡಲು ದೇಶ ವಿದೇಶಗಳಿಂದ ಜನತೆ ಆಗಮಿಸಿದ್ದು, ಒಂಟೆಗಳ ಕಸರತ್ತು ನಿಜಕ್ಕೂ ಗಮನ ಸೆಳೆಯುತ್ತಿವೆ.
ಒಂಟೆಗಳ ಮಾಲೀಕರು ಅವುಗಳೊಂದಿಗೆ ಆಡುವ ಕಸರತ್ತು ನೋಡುಗರನ್ನು ಆಕರ್ಷಿಸುತ್ತದೆ. ಅಭರಣ ಹಾಗೂ ಬಟ್ಟೆಗಳನ್ನು ತೊಟ್ಟು ಸಾಲಂಕೃತವಾದ ಬಟ್ಟೆಗಳೊಂದಿಗೆ ಕಂಗೊಳಿಸುವ ಒಂಟೆಗಳು ಎಲ್ಲರನ್ನು ತಮ್ಮತ್ತ ಸೆಳೆಯುತ್ತದೆ.
ಈ ಜಾತ್ರೆಯಲ್ಲಿ ಉತ್ತಮ ಬಟ್ಟೆ ತೊಟ್ಟು ಆಕರ್ಷಕ ಪ್ರದರ್ಶನ ನೀಡಿದ ಒಂಟೆಗೆ ಬಹುಮಾನವನ್ನು ನೀಡಲಾಗುತ್ತದೆ. ಈ ವಿಶಿಷ್ಟ ಜಾತ್ರೆಯಲ್ಲಿ ಪಾಲ್ಗೊಂಡ ವಿದೇಶಿಯರು ತಮ್ಮ ಅುಭವ ಹಂಚಿಕೊಂಡು, ಸಂಭ್ರಮಿಸಿದರು.
ಅಷ್ಟೇ ಅಲ್ಲದೆ ಈ ಒಂಟೆ ಜಾತ್ರೆಯಲ್ಲಿ ಜಾನುವಾರುಗಳ ಖರೀದಿ, ಮಾರಾಟ ಕೂಡ ನಡೆಯುತ್ತದೆ…