ಉತ್ತರಕ್ಕೆ ತಲೆ ಇಟ್ಟು ಮಲಗಿದರೆ ಏನಾಗುತ್ತೆ…?

ಕಿರಿಯರು ಏನಾದರೂ ಉತ್ತರಕ್ಕೆ ತಲೆ ಇಟ್ಟು ಮಲಗಿದರೆಂದರೆ ಮುಗಿಯಿತು. ಮನೆಯಲ್ಲಿನ ಹಿರಿಯರು ಹಿಗ್ಗಾಮುಗ್ಗಾ ಬೈಯ್ದುಬಿಡುತ್ತಾರೆ. ಅವರ ನಂಬಿಕೆ ಪ್ರಕಾರ ಉತ್ತರಕ್ಕೆ ತಲೆಇಟ್ಟು ಮಲಗುವುದರಿಂದ ದೆವ್ವ ಅಥವ ಭೂತಗಳು ನಮ್ಮದೇಹವನ್ನು ಪ್ರವೇಶಿಸಿ ಕೆಡುಕು ಉಂಟು ಮಾಡುತ್ತದೆ ಎಂಬುದು. ಆದರೆ ಉತ್ತರಕ್ಕೆ ತಲೆಇಟ್ಟು ಮಲಗಬಾರದು ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇದೆ.
ವಿಜ್ಞಾನ ಹೇಳುವುದೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವಿದೆ. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತವೆಯೋ ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುತ್ತದೆ. ಹೀಗಾಗಿ ದೇಹದಲ್ಲಿ ಕಾಂತ ಕ್ಷೇತ್ರದ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.
ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಇಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು, ಅಲ್ಜೀಮರ್ ಕಾಯಿಲೆ, ಅರಿವಿನ ಕೊರತೆ, ಪಾರ್ಕಿನ್ ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷಿಣಿಸುತ್ತದೆ.