ನೀವು ಮಾಡುತ್ತಿರುವ ಜಾಗಿಂಗ್ ಎಷ್ಟರ ಮಟ್ಟಿಗೆ ಸರಿಯಾಗಿದೆ…?

0
FITNESS AND JOGGING- HEALTH

ಫಿಟ್ ನೆಸ್ ಇದೀಗ ಎಲ್ಲರೂ ಪಠಿಸುತ್ತಿರುವ ಮಂತ್ರ. ಹೀಗಾಗಿ ಬೆಳಗಾದರೆ ಸಾಕು ಹಲವು ಮಂದಿ ಜಾಗಿಂಗ್ , ವಾಕಿಂಗ್ ಎಂದು ಹೊರಟು ಬಿಡುತ್ತಾರೆ. ಆದರೆ ನಿಮಗೊತ್ತಾ. ನೀವು ಮಾಡುತ್ತಿರುವ ಜಾಗಿಂಗ್ ಎಷ್ಟರ ಮಟ್ಟಿಗೆ ನಿಮ್ಮ ಆರೋಗ್ಯ ಕಾಪಾಡುತ್ತದೆ.

ನೀವು ಮಾಡುತ್ತಿರುವ ಜಾಗಿಂಗ್ ಸರಿಯಾಗಿದೆಯೇ ಎಂದು. ಸಂಶೋಧನೆಯೊಂದರ ಪ್ರಕಾರ, ಜಾಗಿಂಗ್ ಹೋಗುವ ಮಂದಿ ಕೆಲವೊಂದು ವಿಚಾರಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಇದ್ದರೆ ಅರೋಗ್ಯಕ್ಕಿಂದ ಅನಾರೋಗ್ಯವೇ ಹೆಚ್ಚಾಗಿ ಅವರನ್ನು ಬಾದಿಸುತ್ತದೆಯಂತೆ.

ಜಾಗಿಂಗ್ ಮಾಡುವಾಗ ತಮ್ಮೊಂದಿಗೆ ಜಾಗಿಂಗ್ ಮಾಡುವ ವ್ಯಕ್ತಿಗೆ ಸಮಾನಾಗಿ ಓಡುವುದರಿಂದ ಸಮಸ್ಯೆಗಳು ಹೆಚ್ಚಂತೆ. ನಮ್ಮ ವೇಗ ನಮ್ಮ ಸಾಮಾರ್ಥ್ಯಕ್ಕೆ ತಕ್ಕಂತೆ ಇರಬೇಕು ಎನ್ನುತ್ತಾರೆ ವೈದ್ಯರು. ಇನ್ನೂ ಧರಿಸುವ ಶೂ ಕೂಡ ಹೆಚ್ಚು ಕಂಫರ್ಟ್ ಆಗಿ ಇರಬೇಕೆಂತೆ.

ಯಾವುದೇ ಕಾರಣಕ್ಕೂ ತನ್ನ ಜೊತೆಗಾರ ವೇಗವಾಗಿ ಓಡುತ್ತಿದ್ದಾನೆ ಎಂಬ ಕಾರಣಕ್ಕೆ ನಾವು ಅವರೊಂದಿಗೆ ಹೆಜ್ಜೆಹಾಕುವುದು ಸರಿಯಲ್ಲ ಎನ್ನುತ್ತಾರೆ ವೈದ್ಯರು.ಅಷ್ಟೇ ಅಲ್ಲದೆ ಜಾಗಿಂಗ್ ಮಾಡುವ ಮಂದಿ, ಕಾಲು ಹಾಗೂ ಇತರ ಸಣ್ಣ ಪುಟ್ಟ ಎಕ್ಸ್ ಸೈಸ್ ಮಾಡಿಲ್ಲವೆಂದರೆ ಅವರಿಗೆ ಕಾಲಿಗೆ ಸಂಬಂದಪಟ್ಟ ಸಮಸ್ಯೆಗಳು ಕಟ್ಟಿಟ್ಟಬುತ್ತಿಯಂತೆ…

Leave a Reply

Your email address will not be published. Required fields are marked *

You may have missed