ಹುಷಾರ್..! ತಂತ್ರಜ್ಞಾನದ ವೇಗದ ಜೊತೆಗೆ ಭಯಾನಕ ಕಾಯಿಲೆಗಳು ಅಂಟಿಕೊಳ್ಳುತ್ತಿದೆಯಂತೆ

0

ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದು, ಈತಂತ್ರಜ್ಞಾನ ಲೋಕದ ವೇಗ ಎಷ್ಟು ಅಗತ್ಯವೋ ಅಷ್ಟೇ ಕೆಡುಕನ್ನು ಉಂಟು ಮಾಡುತ್ತಿದೆ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.ಇಷ್ಟಾದರೂ ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಕಾಲದ ಜೊತೆ ರಾಜಿ ಮಾಡಿಕೊಂಡು ಮುನ್ನುಗ್ಗುತ್ತಿದ್ದೇವೆ. ಆದರೆ ಈ ರಾಜಿ ಸಂದಾನ ಕೆಲವೊಮ್ಮೆ ಎಷ್ಟು ದೊಡ್ಡ ಅಪಾಯವನ್ನು ತಂದಿಕ್ಕುತ್ತದೆ ಗೊತ್ತೆ.

ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆಜೊತೆಗೆ ಭಯಾನಕರ ಕಾಯಿಲೆಗಳು ಮಾನವನನ್ನು ಕಾಡುತ್ತಿದ್ದು, ಇದರಲ್ಲಿ ಹಲವನ್ನು ನಾವೆ ಬಿಗಿದಪ್ಪಿಕೊಳ್ಳುತ್ತಿದ್ದೇವೆ ಎನ್ನುತ್ತಿದೆ ಸಂಶೋದನೆಗಳು. ಹೌದು ಏಷ್ಯಾದ ಹದಿಹರೆಯದವರಲ್ಲೂ ಹೆಚ್ ಐವಿ ಸೋಂಕು ವ್ಯಾಪಿಸಲು ಆರಂಭವಾಗಿದ್ದು, ಇದಕ್ಕೆ ಸ್ಮಾರ್ಟ್ ಪೋನ್ ಡೇಟಿಂಗ್ ಆಪ್ ಗಳು ಕಾರಣವಂತೆ. ವಿಶ್ವಸಂಸ್ಥೆ ಹೊರಹಾಕಿರುವ ಇಂತಹದೊಂದು ಅಘಾತಕಾರಿ ಮಾಹಿತಿ ನಿಜಕ್ಕೂ ಬೆಚ್ಚಿಬೀಳುವಂತೆ ಮಾಡಿದೆ.

ಮೊಬೈಲ್ ಡೇಟಿಂಗ್ ಆಪ್ ಗಳು ಡೇಟಿಂಗ್ ಮತ್ತು ಸೆಕ್ಸ್ ಗೆ ಮುಕ್ತ ಅವಕಾಶ ಒದಗಿಸುತ್ತಿದ್ದು, ಸಲಿಂಗಕಾಮ, ವೇಶ್ಯೆಯರ ಸಹವಾಸ, ಮಂಗಳಮುಖಿಯರೊಂದಿಗೆ ದೈಹಿಕ ಸಂಪರ್ಕ, ಅಸುರಕ್ಷಿತಸೆಕ್ಸ್, ಮಾದಕ ವಸ್ತುಗಳ, ಕಾಮೊತ್ತೆಜನಕಗಳ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಜಗತ್ತಿನ ಕೋಟಿಯತ್ಯಂತರ ಮಂದಿ ಹದಿಹರೆಯದವರಲ್ಲಿ ಹೆಚ್ ಐವಿ ಸೊಂಕು ಕಾಣಸಿಕೊಂಡಿದೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ.

ಇನ್ನೂ ಇಂತಹ ಕಳವಳಿಕಾರಿ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿಶ್ವಸಂಸ್ಥೆ, ಇಂತಹ ಅಪ್ ಗಳಿಗೆ ಜಾಗೃತಿ ಸಂದೇಶ ರವಾನಿಸುವ ಕುರಿತಂತೆ ಚಿಂತನೆ ನಡೆಸಿದೆ….

Leave a Reply

Your email address will not be published. Required fields are marked *

You may have missed