ರಮೇಶ ಅರವಿಂದ ನಿರ್ದೇಶನದ ಉತ್ತಮ ವಿಲನ್‍ಗೆ 5 ಅಂತರರಾಷ್ಟ್ರೀಯ ಪ್ರಶಸ್ತಿಗಳು
![ramesh aravind](https://cauverynews.in/wp-content/uploads/2022/12/ramesh-aravind.jpg)
ಕನ್ನಡಿಗ ಸ್ಯಾಂಡಲ್‍ವುಡ್‍ನ ಹ್ಯಾಂಡ್ಸ್‍ಮ್ ನಟ ರಮೇಶ ಅರವಿಂದ ನಿರ್ದೇಶನದ ತಮಿಳು ಚಿತ್ರ ಉತ್ತಮ ವಿಲನ್ ಚಿತ್ರಕ್ಕೆ 5 ಅಂತರರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ. ಲಾಸ್ ಏಂಜಲೀಸ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್‍ನ ಡಿಫ್ರೆಂಟ್ ಕೆಟಗರಿ ಚಿತ್ರ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಭಾಜಿಕೊಂಡಿದೆ.
ಬಹುಭಾಷಾ ನಟ ಕಮಲ್ ಹಾಸನ್ ನಟಸಿರುವ ಉತ್ತಮ ವಿಲನ್ ದಕ್ಷಿಣ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಚಿತ್ರ ಇದಾಗಿದ್ದು, ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವುದು ಚಿತ್ರ ತಂಡಕ್ಕೆ ತುಂಬಾ ಖುಸಿಕೊಟ್ಟಿದೆ. ಇದರಿಂದಾಗಿ ಸಹಜವಾಗಿ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಉತ್ತಮ ನಟ, ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ, ಗೀತ ರಚನೆ ಮತ್ತು ಸೌಂಡ್ ಡಿಸೈನ್ ನ 5 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಉತ್ತಮ ನಟ ಪ್ರಶಸ್ತಿ ಕಮಲ್ ಹಾಸನ್ ಪಾಲಾಗಿದೆ. ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ ಮತ್ತು ಗೀತ ರಚನೆಗೆ ಗಿಬ್ರಾನ್ ಮತ್ತು ಸೌಂಡ್ ಡಿಸೈನ್ ವಿಭಾಗದಲ್ಲಿ ಕುನಾಲ್ ರಾಜನ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ರಷ್ಯನ್ ಫಿಲಿಂ ಫೆಸ್ಟಿವೆಲ್‍ನಲ್ಲೂ ಈ ಚಿತ್ರ ಉತ್ತಮ ಸಾಧನೆ ಮಾಡಿತ್ತು.