ಕನಕನ ಜನ್ಮಸ್ಥಳವಾದ ಬಾಡ ಗ್ರಾಮದಲ್ಲಿ ಕನಕದಾಸರ ಜೀವನಶೈಲಿ ಸಾರುವ ಕಲಾಕೃತಿಗಳು ಅನಾವರಣ

0
haveri- kanakadasa birth place

ಹಾವೇರಿ: ದಾಸಶ್ರೇಷ್ಠ ಕನಕದಾಸರೆಂದರೆ ನಮಗೆ ಮೊದಲು ನೆನಪಿಗೆ ಬರುವುದು ಅವರ ತತ್ವ ಆದರ್ಶಗಳು..ಆದರೆ ಈಗ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಕನಕನ ಜನ್ಮಸ್ಥಳವಾದ ಬಾಡ ಗ್ರಾಮದಲ್ಲಿ ಕನಕದಾಸರ ಜೀವನಶೈಲಿ ಸಾರುವ ಕಲಾಕೃತಿ, ಕನಕನ ಅರಮನೆಯನ್ನು ನಿರ್ಮಾಣ, ಪರಿಸರ ಸ್ನೇಹಿ ವನ ನಿರ್ಮಾಣವನ್ನು ಮಾಡಿ ಎಲ್ಲರ ಗಮನ ಸೆಳೆದಿದೆ.

ಕನಕ ಗದ್ದುಗೆ ಸೇರಿದಂತೆ ಆದಿಕೇಶವನ ದೇವಸ್ಥಾನವನ್ನೂ ಸಹ ನಿರ್ಮಿಸಿದೆ. ಕನಕರ ಆರಾಧ್ಯದೈವ ಆದಿಕೇಶವ ಹಾಗೂ ಚೆನ್ನಕೇಶವ ದೇವಾಲಯವನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಕೈಗೊಂಡಿದೆ. ಅಷ್ಟೇ ಅಲ್ಲದೇ, ಚೆನ್ನಕೇಶವ ದೇವಸ್ಥಾನಕ್ಕೆ ಹೊಂದಿಕೊಂಡಿರುವ 34 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿವನವನ್ನು ನಿರ್ಮಾಣ ಮಾಡಿದೆ.

ಕನಕನ ಜನ್ಮಸ್ಥಳವಾದ ಬಾಡ ಗ್ರಾಮದಲ್ಲಿ ಕನಕನ ಅರಮನೆಯನ್ನು ನಿರ್ಮಾಣ ಮಾಡಿದ್ದು, ಅದರಲ್ಲಿ ಅವರ ಜೀವನ ಮತ್ತು ತತ್ವ ಆದರ್ಶಗಳ ಉಬ್ಬು ಚಿತ್ರಗಳು, ಸ್ಥಬ್ದಚಿತ್ರಗಳು, ಕೆತ್ತಿಸಿದ್ದು ಇದು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *