ಇನ್ನು ಮುಂದೆ ಮಹಿಳೆಯರು 6 ತಿಂಗಳು ಹೆರಿಗೆ ರಜೆ ಪಡೆಯಬಹುದು

0
pregnency

ಮಹಿಳೆಯರ ಮೇಲೆ ಮೋದಿ ಸರ್ಕಾರ ಅನುಕಂಪ ತೋರಿದೆ. ಮಹಿಳೆಯರು   ಇನ್ನು ಮುಂದೆ ಅರ್ಧ ವರ್ಷ ಕಾಲ ಹೆರಿಗೆ ರಜೆ ಪಡೆಯಬಹುದು.  ಈವರೆಗೆ ಇದ್ದ  12 ವಾರಗಳ ರಷ್ಟಿದ್ದ ಹೆರಿಗೆ ರಜೆಯ ಅವಧಿಯನ್ನು 26 ವಾರಗಳ ವರಗೆ ಏರಿಕೆಯಾಗಲಿದೆ. ಅಂದರೆ ಈವರೆಗೆ 90 ದಿನ ಬಾಣಂತನ ರಜೆ ಪಡೆಯಬಹುದಿತ್ತು. ಇನ್ನು ಮುಂದೆ 180 ಕ್ಕೂ ಹೆಚ್ಚು ದಿನ ಈ ರಜೆ ಸೌಲಭ್ಯ ಸಿಗಲಿದೆ.

ಇಂತಹ ಮಹತ್ವಕಾಂಕ್ಷಿಯ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೊದನೆ ದೊರೆಯಿತು. ಮಾತೃತ್ವ ರಜೆಗೆ ತೆರಳುವ ಸ್ತ್ರೀಯರು ಪ್ರಸೂತಿ ಸಮಯದಲ್ಲಿ ತಗಲಿದ ವೆಚ್ಚವನ್ನು ಹಿಂಪಡೆಯಲು ಕೆಲ ಕಂಪನಿಗಳಿಗೆ ವೆಚ್ಚದ ಪ್ರತಿ ಸಲ್ಲಿಸಬಹುದಾಗಿದೆ.

ಸುಮಾರು 1.8 ಮಿಲಿಯ ಮಹಿಳಾ ಕಾರ್ಮಿಕರು ಇದರ ಲಾಭವನ್ನು ಪಡೆಯಲಿದ್ದಾರೆ. ಈಗ 1961 ಹೆರಿಗೆ ರಜೆ ಕಾಯ್ದೆಗೆ ತಿದ್ದುಪಡಿ ಅನ್ವಯ,  ಮಾತೃತ್ವ ರಜೆಗೆ ತೆರಳುವ ದಿನದಲ್ಲಿ ಪೂರ್ಣ ಸಂಬಳ ಪಡೆಯಲು ಮಹಿಳೆಯರು ಅರ್ಹರಾಗಿದ್ದಾರೆ.

Leave a Reply

Your email address will not be published. Required fields are marked *

You may have missed