7ನೇ ಉಪಗ್ರಹ ; ಮತ್ತೊಂದು ಗರಿ ಮುಡಿಗೇರಿಸಿಕೊಂಡ ಇಸ್ರೋ

0
ISRO-IRNSS-1G

ಬಾಹ್ಯಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮನ್ವಂತರ ಬರೆದಿದೆ. ಬಾಹ್ಯಾಕಾಶ ಕೇಂದ್ರದಲ್ಲಿ ತನ್ನದೇ ಆದ ಮೈಲಿಗಲ್ಲು ಸಾಧಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಗುರುವಾರ ಮತ್ತೊಂದು ಗರಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 7ನೇ ಮತ್ತು ಅಂತಿಮ ಉಪಗ್ರಹ ಐಆರ್ ಎನ್ ಎಸ್ ಎಸ್-1ಜಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು.
ಮದ್ಯಾಹ್ನ 12.50ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ್.ಎಲ್.ವಿ ಸಿ-33 ವಾಹಕದ ಮೂಲಕ ನಭಕ್ಕೆ ಜಿಗಿದ ಐ.ಆರ್.ಎನ್.ಎಸ್.ಎಸ್-1 ಜಿ ಉಪಗ್ರಹ, 1,425 ಕೆಜಿ ತೂಕ ಹೊಂದಿದ್ದು, ಈ ಉಪಗ್ರಹವನ್ನು ಪಿಎಸ್ ಎಲ್ ವಿ-ಸಿ33 ರಾಕೆಟ್ ಮೂಲಕ ಅಂತರಿಕ್ಷಕ್ಕೆ ಹಾರಿಸಲಾಯಿತು.
ಈ ಉಪಗ್ರಹ 12 ವರ್ಷಗಳ  ಕಾಲ ಕಾರ್ಯ ನಿರ್ವಹಿಸಲಿದೆ. ಈವರೆಗೆ  ಭಾರತ ಆರು ಪ್ರಾದೇಶಿಕ ದಿಕ್ಷೂಚಿ ಉಪಗ್ರಹಗಳಾದ ಐ.ಆರ್.ಎನ್.ಎಸ್.ಎಸ್-1ಎ, 1ಬಿ, 1 ಸಿ, 1ಡಿ, 1ಇ ಮತ್ತು 1 ಎಫ್ ಗಳನ್ನು ಉಡಾಯಿಸಿದ್ದು, ಇದು ಏಳನೇಯ ಹಾಗೂ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ ಭಾಗದ ಕೊನೆಯ ಉಪಗ್ರಹವಾಗಿದೆ.
ಈ ನಡುವೆ ಉಪಗ್ರಹ ಯಶಸ್ವಿಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರಮೋದಿ ಈ ಯಶೋಗಾಥೆಗೆ ಶ್ರಮಿಸಿರುವ ವಿಜ್ಞಾನಿಗಳನ್ನು ಅವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *