ಆಸ್ಟ್ರೇಲಿಯಾ ಓಪನ್ ಟೆನ್ನೀಸ್ ಟೂರ್ನಿ; ಸಾನಿಯಾ-ಹಿಂಗೀಸ್ ಜೋಡಿ ಪೈನಲ್ ಗೆ ಲಗ್ಗೆ

0
BNP Paribas Open - Day 13

INDIAN WELLS, CA - MARCH 21: Sania Mirza of India and Martina Hingis of Switzerland celebrate defeating Ekaterina Makarova and Elena Vesnina of Russia in the women's doubles during day thirteen of the BNP Paribas Open tennis at the Indian Wells Tennis Garden on March 21, 2015 in Indian Wells, California. (Photo by Julian Finney/Getty Images)

ವಿಶ್ವದ ನಂಬರ್ 1 ಟೆನ್ನಿಸ್ ಜೋಡಿ ಭಾರತದ ಖ್ಯಾತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗೀಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

ಮೊಲ್ಬೋರ್ನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 13ನೇ ಶ್ರೇಯಾಂಕದ ಜೂಲಿಯಾ ಜಾರ್ಜಸ್ ಮತ್ತು ಕ್ಯಾರೊಲಿನಾ ಪ್ಲಿಸ್ಕೋವಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ರೋಚಕ ಜಯ ದಾಖಲಿಸಿ 3ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.

ಸುಮಾರು 27 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ಈ ಜೋಡಿ ಜಾರ್ಜಸ್ ಮತ್ತು ಕ್ಯಾರೊಲಿನಾ ಪ್ಲಿಸ್ಕೋವಾ ಜೋಡಿಯನ್ನು 6-1, 6-0 ನೇರ ಸೆಟ್ ಗಳ ಅಂತರದಿಂದ ಸೋಲಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಈ ಜೋಡಿ 7ನೇ ಶ್ರೇಯಾಂಕದ ಆಂಡ್ರಿಯಾ ಮತ್ತು ಲೂಸೀ ಹಾರ್ಡೇಕ್ಕ್ ಅವರನ್ನು ಎದುರಿಸಲಿದೆ.

Leave a Reply

Your email address will not be published. Required fields are marked *

You may have missed