ವಿಷ್ಣು ಅವತಾರದ ಜಾಹಿರಾತು ವಿವಾದ; ಮಹೇಂದ್ರ ಸಿಂಗ್ ದೋನಿಗೆ ಕೊಂಚ ರಿಲೀಫ್

0
Mahendra-Singh-Dhoni-13

ಜಾಹಿರಾತಲ್ಲಿ ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಭಾರತ ಕ್ರಿಕೇಟ್ ತಂಡ ನಾಯಕ ಮಹೇಂದ್ರ ಸಿಂಗ್ ದೋನಿಗೆ ಕೊಂಚ ರಿಲೀಫ್ ಸಿಕ್ಕಿದೆ. ದೋನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಕೋರ್ಟ್ ತಡೆ ನೀಡಿದೆ. ಅಲ್ಲದೆ ವಿಚಾರಣೆಯನ್ನು ಬೆಂಗಳೂರು ಸೇರಿದಂತೆ ಇತರ ಕೋರ್ಟ್ ಗೆ ರವಾನಿಸಬಹುದು ಎಂದು ಸೂಚಿಸಿದೆ.

ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವಂತಹ ಜಾಹಿರಾತಿನಲ್ಲಿ ದೋನಿ ಕಾಣಿಸಿಕೊಂಡಿದ್ದಾರೆ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಅರ್ಜಿಗೆ ತಡೆ ನೀಡಿದೆ.

2013ರ ಏಪ್ರಿಲ್ ನಲ್ಲಿ ಪ್ರಕಟವಾದ ಬುಸಿನೆಸ್ ಟುಡೇ ನಿಯತಕಾಲಿಕೆಯ ಮುಖಪುಟದಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಅದರಲ್ಲಿ ಭಗವಾನ್ ವಿಷ್ಣುವಿನಂತೆ ಅವರನ್ನು ತೋರಿಸಲಾಗಿತ್ತು. ಈ ಭಾವಚಿತ್ರದಲ್ಲಿ ಶೂ ಸೇರಿದಂತೆ ಹಲವು ಉತ್ಪನ್ನಗಳನ್ನು ಧೋನಿ ಹಿಡಿದುಕೊಂಡಿದ್ದರು. ಈ ಜಾಹೀರಾತಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಅನಂತಪುರದ ವಿಶ್ವ ಹಿಂದೂ ಪರಿಷತ್ ನಾಯಕ ಶ್ಯಾಮಸುಂದರ್ ಧೋನಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

Leave a Reply

Your email address will not be published. Required fields are marked *