ಮೈಸೂರು ಜನತೆಯನ್ನು ಕುತೂಹಲಕ್ಕೆ ಎಡೆಮಾಡಿಕೊಟ್ಟ ಹಾರುವ ತಟ್ಟೆಗಳು?

ಮೈಸೂರು: ಇಲ್ಲಿನ ವಿಜಯನಗರದ ಬಳಿ ಹಾರುವ ತಟ್ಟೆಗಳನ್ನು ಹೋಲುವ ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ಸ್ಥಳಿಯರೊಬ್ಬರಿಗೆ ಈ ವಸ್ತು ಕಂಡು ಬಂದಿದ್ದು, ಅದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಚಂದ್ರನ ಫೋಟೊ ತೆಗೆಯಲು ಆಕಾಶ ನೋಡಿದಾಗ ಹಾರುವ ತಟ್ಟೆಗಳಂತಹ ವಸ್ತುಗಳ ದರ್ಶನವಾಗಿವೆ. ತಕ್ಷಣ ಸ್ಥಳೀಯ ಮಂಜುನಾಥ್ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ವಿಜಯನಗರದ ವಾಟರ್ ಟ್ಯಾಂಕ್ ಬಳಿ ಕಂಡು ಬಂದಿದ್ದು, ಎರಡು ಫೋಟೋಗಳಲ್ಲಿ ಸಂಚರಿಸುತ್ತಿರುವ ತಟ್ಟೆಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಈ ವಿದ್ಯಮಾನ ಮೈಸೂರು ಜನತೆಯನ್ನು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇದೇ ರೀತಿಯಲ್ಲಿ ಕೆಲವು ದಿನಗಳ ಹಿಂದೆ ಮೈಸೂರಿನ ಹೊಲವೊಂದರಲ್ಲಿ ಏಲಿಯನ್ ಗಳು ಪತ್ತೆಯಾಗಿದ್ದವು.