KPSC: ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಗೆ ಶೇ.59ರಷ್ಟು ಅಭ್ಯರ್ಥಿಗಳು ಹಾಜರು: 59,807 ಮಂದಿ ಗೈರು

0
KPSC-Karnataka

ಬೆಂಗಳೂರು: ರಾಜ್ಯಾದ್ಯಂತ ನವೆಂಬರ್ 15ರಂದು ನಡೆದ ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆಗೆ ಶೇ.59ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತಿಳಿಸಿದೆ.

ಒಟ್ಟು 1,47,067 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 1,14,406 ಮಂದಿ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಈ ಪೈಕಿ 87,260 ಅಭ್ಯರ್ಥಿಗಳು ಪರೀಕ್ಷೆ ಬರೆದರೆ, 59,807 ಮಂದಿ ಗೈರಾಗಿದ್ದಾರೆ. ಹಾಲ್‌ಟಿಕೆಟ್ ಪಡೆದಿದ್ದರೂ 27,146 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ.

ರಾಜ್ಯದ 15 ಜಿಲ್ಲೆಗಳ 345 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ಅಕ್ರಮ ತಡೆಗೆ ಸಿಸಿಟಿವಿ, ಪೊಲೀಸ್ ಕಣ್ಗಾವಲು, ಬಿಗಿ ತಪಾಸಣೆ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ನಿಷೇಧ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿತ್ತು. ವಸ್ತ್ರಸಂಹಿತೆಯನ್ನೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

ಈ ಬಾರಿ ಒಎಂಆರ್ ಪತ್ರಿಕೆಯಲ್ಲಿ ನಾಲ್ಕು ಆಯ್ಕೆಗಳ ಜತೆಗೆ ಐದನೇ ಕಾಲಂ ಸೇರಿಸಲಾಗಿದೆ. ಉತ್ತರ ತಿಳಿಯದ ಪ್ರಶ್ನೆಗಳಿಗೆ ಈ ಕಾಲಂ ಗುರುತಿಸುವ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳು, ಕೆಪಿಎಸ್‌ಸಿ ಮತ್ತು ಜಿಲ್ಲಾಧಿಕಾರಿಗಳ ಸ್ಟ್ರಾಂಗ್ ರೂಂನಲ್ಲಿ ಸಂರಕ್ಷಿಸಲು ಮೂರು ಒಎಂಆರ್ ಪ್ರತಿಗಳನ್ನು ವಿತರಿಸಲಾಗಿದೆ.

Leave a Reply

Your email address will not be published. Required fields are marked *