ಜಾಗತಿಕ ಇಂಧನ, ಆಹಾರ ಪೂರೈಕೆಗೆ ಬಿಕ್ಕಟ್ಟು; ಒಗ್ಗಟ್ಟಿನ ಕ್ರಮ ಕೈಗೊಳ್ಳಲು ಜಿ20 ರಾಷ್ಟ್ರಗಳಿಗೆ ಕರೆ

0
US-Secretary-of-State-Marco-Rubio

ಅಟ್ಲಾಂಟಾ: ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಇಂಧನ, ಆಹಾರ ಪೂರೈಕೆ ಹಾಗೂ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಹೇಳಿದ್ದಾರೆ.

ಅಟ್ಲಾಂಟಾದಲ್ಲಿ ಜಿ20 ವಿದೇಶಾಂಗ ಸಚಿವರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪೂರೈಕೆ ಸರಪಳಿಗಳಲ್ಲಿನ ಅಸ್ಥಿರತೆ ಜಾಗತಿಕ ಆರ್ಥಿಕ ಸ್ಥಿರತೆಗೆ ಸವಾಲಾಗಿದೆ. ಉದಯಿಸುತ್ತಿರುವ ಬಿಕ್ಕಟ್ಟುಗಳಿಗೆ ರಾಜತಾಂತ್ರಿಕರು ಸಮನ್ವಯದಿಂದ ಸ್ಪಂದಿಸಬೇಕು. ಮಾರುಕಟ್ಟೆಗಳ ರಕ್ಷಣೆಗೆ ಜಿ20 ರಾಷ್ಟ್ರಗಳು ಒಗ್ಗಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯ ಮೊದಲ ಅಧಿವೇಶನದಲ್ಲಿ ನೌಕಾಯಾನದ ಸ್ವಾತಂತ್ರ್ಯ ಮತ್ತು ಆಹಾರ ಭದ್ರತೆ ಕುರಿತು ಚರ್ಚಿಸಲಾಯಿತು. ಸಮುದ್ರ ಮಾರ್ಗಗಳಲ್ಲಿನ ವ್ಯತ್ಯಯದಿಂದ ಇಂಧನ ಹಾಗೂ ಕೃಷಿ ಉತ್ಪನ್ನಗಳ ಸಾಗಣೆಗೆ ಅಡ್ಡಿಯಾಗುತ್ತಿದೆ ಎಂಬ ಕಳವಳವೂ ವ್ಯಕ್ತವಾಯಿತು.

Leave a Reply

Your email address will not be published. Required fields are marked *