ಮಣ್ಣಿನ ಆರೋಗ್ಯ ರಕ್ಷಣೆಗೆ ‘ಖೇತ್ ಬಚಾವೋ ಅಭಿಯಾನ’ಕ್ಕೆ ಚಾಲನೆ

0
Kagodu-Farmer-Sharadamma

ಕರ್ನಾಲ್: ಮಣ್ಣಿನ ಫಲವತ್ತತೆ ಕಾಪಾಡಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಹರಿಯಾಣದ ಕರ್ನಾಲ್ ಜಿಲ್ಲೆಯ ತಾರೋರಿಯಲ್ಲಿ ರಾಷ್ಟ್ರವ್ಯಾಪಿ ‘ಖೇತ್ ಬಚಾವೋ ಅಭಿಯಾನ’ಕ್ಕೆ ಚಾಲನೆ ನೀಡಿದರು. ಅಕ್ಟೋಬರ್ 22ರಿಂದ ನವೆಂಬರ್ 30ರವರೆಗೆ ನಡೆಯುವ ಅಭಿಯಾನದಡಿ ಕೃಷಿ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದರ ಜತೆಗೆ ಮಾನವನ ಆರೋಗ್ಯಕ್ಕೂ ಅಪಾಯ ಎದುರಾಗಬಹುದು ಎಂದು ಚೌಹಾಣ್ ಎಚ್ಚರಿಸಿದರು. ರೈತರು ರಸಗೊಬ್ಬರ ಬಳಸುವ ಮೊದಲು ಮಣ್ಣಿನ ಆರೋಗ್ಯ ಕಾರ್ಡ್ ಪರಿಶೀಲಿಸಿ, ಅಗತ್ಯವಿರುವ ಪೋಷಕಾಂಶಗಳನ್ನಷ್ಟೇ ಬಳಸಬೇಕು ಎಂದು ಸಲಹೆ ನೀಡಿದರು. ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ ₹1.5 ಲಕ್ಷ ಕೋಟಿಗೂ ಅಧಿಕ ಹಣ ವೆಚ್ಚ ಮಾಡುತ್ತಿದೆ ಎಂದರು.

ಸಮತೋಲಿತ ರಸಗೊಬ್ಬರ ಬಳಕೆ, ದ್ವಿದಳ ಧಾನ್ಯಗಳನ್ನು ಒಳಗೊಂಡ ಬೆಳೆ ಸರದಿ ಮತ್ತು ನೈಸರ್ಗಿಕ ಕೃಷಿ ಅಭಿಯಾನದ ಪ್ರಮುಖ ಆದ್ಯತೆಗಳಾಗಿವೆ. ಬೀಜಾಮೃತ, ಘನಜೀವಾಮೃತದಂತಹ ನೈಸರ್ಗಿಕ ಸಿದ್ಧತೆಗಳನ್ನು ಬಳಸಿ ಕನಿಷ್ಠ ಅರ್ಧ ಎಕರೆಯಲ್ಲಿ ನೈಸರ್ಗಿಕ ಕೃಷಿ ಆರಂಭಿಸುವಂತೆ ರೈತರಿಗೆ ಕರೆ ನೀಡಿದರು. ಬೆಳೆ ಅವಶೇಷ ಸುಡುವುದರಿಂದ ಪ್ರಯೋಜನಕಾರಿ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳಿಗೆ ಹಾನಿಯಾಗುವುದರಿಂದ ಅದನ್ನು ತಪ್ಪಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ–ಗ್ರಾಮೀಣದಡಿ ಹರಿಯಾಣದ ಅರ್ಹ ಬಡ ಕುಟುಂಬಗಳಿಗೆ 28,422 ಮನೆಗಳ ನಿರ್ಮಾಣಕ್ಕಾಗಿ ₹1,343.06 ಕೋಟಿ ಮಂಜೂರಾತಿ ಪತ್ರವನ್ನು ಚೌಹಾಣ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಐಸಿಎಆರ್ ಮಹಾನಿರ್ದೇಶಕ ಡಾ. ಮಂಗಿ ಲಾಲ್ ಜಾಟ್, ಹರಿಯಾಣ ಕೃಷಿ ಸಚಿವ ಶ್ಯಾಮ್ ಸಿಂಗ್ ರಾಣಾ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *