ಮಾದಕ ವಸ್ತುಗಳ ಪೂರೈಕೆಗೆ ರಾಜಕೀಯ ರಕ್ಷಣೆ ಇಲ್ಲದೆ ಸಾಧ್ಯವಿಲ್ಲ: ಅಮಿತ್ ಶಾ

0
amith-shah

ಲುಧಿಯಾನಾ: ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳ ಮೂಲಕ ದೇಶಕ್ಕೆ ಬರುತ್ತಿರುವ ಮಾದಕ ವಸ್ತುಗಳು ಪಂಜಾಬ್‌ನ ಯುವಕರ ಕೈಗೆ ಹೇಗೆ ತಲುಪುತ್ತಿವೆ? ರಾಜಕೀಯ ರಕ್ಷಣೆ ಇಲ್ಲದೆ ಇಂತಹ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಪಂಜಾಬ್‌ನ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗುಜರಾತ್ ಬಂದರುಗಳ ಮೂಲಕ ಮಾದಕ ವಸ್ತುಗಳು ಬರುತ್ತಿವೆ ಎಂದು ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆದರೆ, ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳಲ್ಲಿ ಈವರೆಗೆ ಸುಮಾರು ₹20,000 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಸಣ್ಣ ಪ್ಯಾಕೆಟ್‌ಗಳಾಗಿ ವಿಭಜಿಸಿದ ಬಳಿಕ ಅವು ಪಂಜಾಬ್‌ಗೆ ಹೇಗೆ ತಲುಪುತ್ತವೆ ಎಂಬುದನ್ನು ಪ್ರಶ್ನಿಸಿದ ಅಮಿತ್ ಶಾ, ಈ ಜಾಲವನ್ನು ತಡೆಯಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಪಂಜಾಬ್‌ನ ಯುವಕರಿಗೆ ಮಾದಕ ವಸ್ತುಗಳು ತಲುಪುತ್ತಿರುವುದರ ಹಿಂದೆ ರಾಜಕೀಯ ಪ್ರಭಾವ ಅಥವಾ ರಕ್ಷಣೆ ಇದೆಯೇ ಎಂಬುದರ ಕುರಿತು ತನಿಖೆ ನಡೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ

Leave a Reply

Your email address will not be published. Required fields are marked *