ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ ಲೋಕಾಯುಕ್ತ; ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದ ಬಿಜೆಪಿ

ಬೆಂಗಳೂರು: ಮಂತ್ರಿಗಿರಿಯ ಕನಸು ಕಾಣುತ್ತಿದ್ದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಲೋಕಾಯುಕ್ತವೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, ಜಮೀರ್ ಅಹ್ಮದ್ ಅವರ 25 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಪಾಪದ ಕೊಡ ಈಗ ತುಂಬಿದೆ ಎಂದು ಹೇಳಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ X ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘IMA ಹಗರಣದಲ್ಲಿ ಸಾವಿರಾರು ಮುಗ್ಧ ಜನರಿಗೆ ವಂಚಿಸಿದ ಹಣದಲ್ಲಿ ಅಕ್ರಮ ಆಸ್ತಿ ಮಾಡಿರುವ ಚಾಮರಾಜಪೇಟೆ ಶಾಸಕರ ವಿರುದ್ಧ ಇದೀಗ ಲೋಕಾಯುಕ್ತವೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ ಎಂದು ಮಾಹಿತಿ ಹಂಚಿಕೊಂಡಿದೆ.
‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕಪ್ಪು ಹಣ ತಿಂದವರು ಜೈಲು ಸೇರಲೇಬೇಕು. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್’ ಎಂದು ಬಿಜೆಪಿ ಟೀಕಿಸಿದೆ.
ಮಂತ್ರಿಗಿರಿಯ ಕನಸು ಕಾಣುತ್ತಿದ್ದ @INCKarnataka ದ ಶಾಸಕ @BZZameerAhmedK ಅವರ 25 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆಯ ಪಾಪದ ಕೊಡ ಈಗ ತುಂಬಿದೆ!
IMA ಹಗರಣದಲ್ಲಿ ಸಾವಿರಾರು ಮುಗ್ಧ ಜನರಿಗೆ ವಂಚಿಸಿದ ಹಣದಲ್ಲಿ ಅಕ್ರಮ ಆಸ್ತಿ ಮಾಡಿರುವ ಚಾಮರಾಜಪೇಟೆ ಶಾಸಕರ ವಿರುದ್ಧ ಇದೀಗ ಲೋಕಾಯುಕ್ತವೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ.
ಉಪ್ಪು… pic.twitter.com/yepZBKkYqC
— BJP Karnataka (@BJP4Karnataka) July 12, 2026
