ಕರ್ನಾಟಕ ಅಂಡರ್-15 ಫುಟ್ಬಾಲ್ ತಂಡಕ್ಕೆ ಸುಳ್ಯದ ಸಿ.ಎಸ್.ಸ್ಕಂದ ಆಯ್ಕೆ

0
Sullia’- C.S. Skanda

ಮಂಗಳೂರು: ಸುಳ್ಯ ಮೂಲದ ಸ್ಕಂದ ಸಿ.ಎಸ್ ಕರ್ನಾಟಕ 7A ಸೈಡ್ ಅಂಡರ್-15 ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೇ 14ರಿಂದ ಗೋವಾದಲ್ಲಿ ನಡೆಯಲಿರುವ ಸಬ್-ಜ್ಯೂನಿಯರ್ ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಅವರು ಕರ್ನಾಟಕ ಪರವಾಗಿ ಆಡಲಿದ್ದಾರೆ.

ಸ್ಕಂದ ಸದ್ಯ ಬೆಂಗಳೂರಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇಂಜಿನಿಯರ್ ಆಗಿರುವ ಎಣ್ಮೂರಿನ ತೇಜಸ್ವಿನಿ ಕೆ.ಎನ್ ಮತ್ತು ದಂಬೆ ರವಿಶಂಕರ ಶಾಸ್ತ್ರಿ ದಂಪತಿಗಳ ಪುತ್ರ. ನಿವೃತ್ತ ಅಧ್ಯಾಪಕರಾದ ಕೀರಿಕ್ಕಾಡು ನಾರಾಯಣ ಭಟ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎ.ಆರ್ ಅವರ ಮೊಮ್ಮಗ.

ಸ್ಕಂದನ ಆಯ್ಕೆಯಿಂದ ಕುಟುಂಬ ಹಾಗೂ ಸ್ಥಳೀಯ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *