ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

0
Police Vehicle- Hoysala

ಬಾಗಲಕೋಟೆ: ಬೆಳಗಾವಿಯ ಕಬ್ಬು ಹೋರಾಟ ಶಮನಗೊಳ್ಳುತ್ತಿದ್ದಂತೆ, ಅದರ ಜ್ವಾಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲೂ ಹೊತ್ತಿಕೊಂಡಿದೆ. ಪ್ರತಿ ಟನ್ ಕಬ್ಬಿಗೆ ₹3,500 ನೀಡುವಂತೆ ಆಗ್ರಹಿಸುತ್ತಿರುವ ರೈತರು ಶುಕ್ರವಾರ ತಮ್ಮ ಹೋರಾಟವನ್ನು ತೀವ್ರಗೊಳಿಸಿದರು.

ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಎದುರು ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌-ಟ್ರಾಲಿಗಳಿಗೆ ಬೆಂಕಿಹಚ್ಚಿ ರೈತರು ಆಕ್ರೋಶ ಹೊರಹಾಕಿದರು.

ಸರ್ಕಾರ ನಿಗದಿಪಡಿಸಿದ್ದ ₹3,300ರ ಬೆಲೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ರೈತರು ಕಳೆದ ವಾರದಿಂದಲೇ ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ಮುಧೋಳ ಪಟ್ಟಣ ಬಂದ್ ಮಾಡಲಾಗಿತ್ತು. ಕಾರ್ಖಾನೆ ಮಾಲೀಕರು ಸಂಧಾನಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ರೈತರು ಸಿಟ್ಟುಗೊಂಡು, ಗೋದಾವರಿ ಕಾರ್ಖಾನೆ ಕಡೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದು ಬೆಂಕಿ ಹಚ್ಚಿದರುಎನ್ನಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ರೈತರು ಮತ್ತು ಕಾರ್ಖಾನೆಗಳ ನಡುವೆ ಸರ್ಕಾರ ಸಂಧಾನ ನಡೆಸುತ್ತಿದೆ. ಆದರೆ ಕೆಲವರು ರೈತರ ಹೆಸರಿನಲ್ಲಿ ಹಿಂಸಾತ್ಮಕ ಘಟನೆಗಳಿಗೆ ಮುಂದಾಗಿದ್ದಾರೆ,” ಎಂದು ಹೇಳಿದರು.

Leave a Reply

Your email address will not be published. Required fields are marked *

You may have missed