ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರ? ಸಿದ್ದು ಪ್ರಶ್ನೆ

0
Siddaramaiah

ಬೆಂಗಳೂರು: ಸಾಲುಸಾಲು ದುರ್ಘಟನೆಗಳು ನಡೆದಾಗ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರು ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರನ್ನು ತಮ್ಮದೇ ಶೈಲಿಯಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾದಲ್ಲಿ ಹತ್ಯಾಕಾಂಡ ನಡೆದು, ಸಾವಿರಾರು ಅಮಾಯಕರು ಬಲಿಯಾಗಿದ್ದಾರೆ, ವಿಮಾನ ಅಪಘಾತ, ರೈಲ್ವೇ ದುರಂತಗಳು ಸಾಲು ಸಾಲು ನಡೆದು ಎಷ್ಟೋ ಜನ ಬಲಿಯಾಗಿದ್ದಾರೆ, ಮಣಿಪುರ ಕಳೆದ ಕೆಲವು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ, ಅಲ್ಲಿ ನಿತ್ಯವೂ ಜನ ಸಾಯುತ್ತಿದ್ದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸೇತುವೆ ಕುಸಿದು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆಗೆಲ್ಲ ಘಟನೆಯ ಹೊಣೆಹೊತ್ತು ಬಿಜೆಪಿಯವರು ರಾಜೀನಾಮೆ ನೀಡಿದ್ದಾರ ಎಂದು ಪ್ರಶ್ನಿಸಿದ್ದಾರೆ.

ಇದು ಸಮರ್ಥನೆ ಅಲ್ಲ, ವಾಸ್ತವಾಂಶ. ಸಾವು- ನೋವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದವರು ಪ್ರತಿಪಾದಿಸಿದ್ದಾರೆ.

Leave a Reply

Your email address will not be published. Required fields are marked *