ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ‘ಎಫ್-35 ಯುದ್ಧ ವಿಮಾನ’ ತುರ್ತು ಭೂಸ್ಪರ್ಶ

0
Thiruvananthapuram Airport , Tiruvananthapuram Airport

ತಿರುವನಂತಪುರಂ: ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್‌ನ ಎಫ್-35ಬಿ ಯುದ್ಧ ವಿಮಾನವೊಂದು ಶನಿವಾರ ರಾತ್ರಿ ತುರ್ತು ಭೂಸ್ಪರ್ಶ ನಡೆಸಿದೆ.

ಹಿಂದೂ ಮಹಾಸಾಗರದ ಮೇಲೆ ನಿಯೋಜಿತ ಹಾರಾಟದ ವೇಳೆ ವಿಮಾನದಲ್ಲಿ ಇಂಧನದ ಅಸಮರ್ಪಕತೆ ಉಂಟಾಗಿದ್ದು, ರಾತ್ರಿ ಸುಮಾರು 9.30ಕ್ಕೆ ತುರ್ತು ಇಳಿಕೆಗಾಗಿ ಅನುಮತಿ ಕೇಳಿ ತಿರುವನಂತಪುರಂಗೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯುದ್ಧ ವಿಮಾನವು ಯುನೈಟೆಡ್ ಕಿಂಗ್ಡಮ್ ನ “HMS Prince of Wales” ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿದ್ದು, ಪ್ರಸ್ತುತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಇತ್ತೀಚೆಗಷ್ಟೇ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಕವಾಯತಿನಲ್ಲಿ ಭಾಗವಹಿಸಿದ್ದಿತು.

ಎಫ್-35 ಬಿ ಜಿಟ್‌ ವಿಮಾನವನು ವಿಶ್ವದ ಅತ್ಯಾಧುನಿಕ ಯುದ್ಧವಿಮಾನಗಳ ಪೈಕಿ ಒಂದು ಎಂದು ತಜ್ಞರು ಗುರುತಿಸಿದ್ದು, ಅದರ ರಹಸ್ಯ ವಿನ್ಯಾಸ, ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯ ಮತ್ತು ನೈಜ ಸಮಯದಲ್ಲಿ ಡೇಟಾ ಹಂಚಿಕೆ ಸಾಮರ್ಥ್ಯವು ಅಮೆರಿಕ, ಬ್ರಿಟನ್, ಇಸ್ರೇಲ್ ಮತ್ತು NATO ಸೇನೆಗಳಿಗೆ ಪ್ರಮುಖ ತಂತ್ರಜ್ಞಾನವಾಗಿದೆ.

ಪೈಲಟ್‌ಗಳು ತಕ್ಷಣ ಇಂಧನದ ಕೊರತೆಯನ್ನು ವರದಿ ಮಾಡಿದ್ದು, ಭದ್ರತಾ ಕ್ರಮಗಳೊಂದಿಗೆ ತುರ್ತು ಇಳಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *